
ಮದುಮಗನಿಗೆ ಕೊರಗಜ್ಜ ದೈವ ಹೋಲುವ ವೇಷ- 2 ಮಂದಿ ಬಂಧನ
ಮಂಗಳೂರು; ಬಂಟ್ವಾಳ ತಾಲೂಕಿನ ವಿಟ್ಲದ ಸಾಲೆತ್ತೂರುವಿನ ವಧುವಿನ ಮನೆಗೆ ಕೇರಳ ಮೂಲದ ವರ ಕೊರಗಜ್ಜ ದೈವವನ್ನು ಹೋಲುವ ವೇಷವನ್ನು ಧರಿಸಿ ಬಂದ ವಿಚಾರದಲ್ಲಿ ಎರಡು ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅಹ್ಮದ್ ಮುಜಿತಾಬು (28), ಮೊಯ್ದೀನ್ ಮುನಿಶ್ (19) ಬಂಧಿತರು.
ಪುತ್ತೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಕುಂಬಳೆ ಮಂಗಳಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಅಹ್ಮದ್ ಮುಜಿತಾಬು (28) ಮತ್ತು ಗಾಳಿಯಡ್ಕ ಬಾಯಾರುಪದವು ನಿವಾಸಿ ಮಹಮ್ಮದ್ ಕುಂಞಿ ಪುತ್ರ ಮೊಯ್ದೀನ್ ಮುನಿಶ್ (19) ಬಂಧಿತರು. ಇವರ ಮೇಲೆ ವಿಟ್ಲ ಠಾಣೆಯಲ್ಲಿ ಅ.ಕ್ರ 04/2021 ಕಲಂ:153a, 295 ಬಾಧಂಸಂ ಪ್ರಕಾರ ಪ್ರಕರಣ ದಾಖಲಾಗಿತ್ತು.
ಬಾಯಾರುಪದವು ಹಾಗೂ ಬೆಟ್ಟಂಪಾಡಿಯಲ್ಲಿ ಇಬ್ಬರನ್ನು ವಿಟ್ಲ ಪೊಲೀಸರ ತಂಡ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನವಿಧಿಸಿ ಆದೇಶ ಹೊರಡಿಸಿದೆ.