ಪತಿಯ ಈ ವರ್ತನೆಯೇ ಈಕೆಯ ಸಾವಿಗೆ ಕಾರಣವಾಯ್ತ..?? ಮಹಿಳಾ ಟೆಕ್ಕಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್...
ಬೆಂಗಳೂರು: ಡಿಸೆಂಬರ್ 10ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ ಸಂಗೀತಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಪತಿ ವಿನಯ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ವಿನಯ್ ತನ್ನ ಮತ್ತು ಸಂಗೀತಾ ನಡುವಿನ ಪ್ರೀತಿ, ಮದುವೆ ವಿಷಯವನ್ನು ಬಿಚ್ಚಿಟ್ಟಿದ್ದಾನೆ.ವಿ ನಯ್ ಮತ್ತು ಸಂಗೀತಾ ಇಬ್ಬರು ಇಂಜಿನೀಯರ್ ಗಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ವೀರಣ್ಣ ಪಾಳ್ಯದಲ್ಲಿ ವಾಸವಾಗಿದ್ದರು, ನಾಲ್ಕು ವರ್ಷದ ಪ್ರೀತಿಯ ನಂತರ ಸಂಗೀತಾ ಮತ್ತು ವಿನಯ್ ಮದುವೆ ಆಗಿದ್ದರು, ಪತ್ನಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ವಿನಯ್ ಮಡದಿ ಹೆಸರನ್ನು ಕೈ ಮೇಲೆ ಟ್ಯಟೂ ಸಹ ಹಾಕಿಸಿಕೊಂಡಿದ್ದನು.
ಪತ್ನಿ ನನ್ನಿಂದ ದೂರವಾಗಬಾರದು ಅಂತ ಅತಿಯಾಗಿ ಪ್ರೀತಿಸುತ್ತಿದ್ದೆ. ಆಕೆಯ ಹೆಸರನ್ನು ಕೈಮೇಲೆ ಹಾಕಿಸಿಕೊಂಡಿದೆ. ನನ್ನ ಅತಿಯಾದ ಪ್ರೀತಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ ಎಂಬುದಾಗಿ ವಿನಯ್ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.