ಪ್ರಿಯಾಂಕ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಪತಿ ಹೆಸರು ಕೈಬಿಟ್ಟಿದ್ದು ಈ ಕಾರಣಕ್ಕಂತೆ!
Thursday, December 23, 2021
ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ಪೇಜ್ನಲ್ಲಿ ತಮ್ಮ ಪತಿಯ ಜೋನಾಸ್ ಎಂಬ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಪ್ರಿಯಾಂಕಾ ಚೋಪ್ರಾ ಎಲ್ಲರ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಹೆಸರು ಬದಲಾವಣೆ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದರು. ಆ ಉತ್ತರ ಹೀಗಿತ್ತು… ನನ್ನ ಟ್ವಿಟರ್ಗೆ ಸರಿಹೊಂದುವ ಹೆಸರನ್ನು ನಾನು ಬಯಸುತ್ತಿದೆ. ಆದರೆ, ಹೆಸರು ತೆಗೆದು ಹಾಕಿದ್ದು ಕೂಡ ಒಂದು ದೊಡ್ಡ ಸುದ್ದಿಯಾಗುತ್ತದೆ ಎಂದು ಗೊತ್ತಾದಾಗ ನಿಜಕ್ಕೂ ಹಾಸ್ಯಾಸ್ಪದ ಅನಿಸಿತು. ಇದು ಕೇವಲ ಸಾಮಾಜಿಕ ಜಾಲತಾಣವಷ್ಟೇ ಗಯ್ಸ್, ಜಸ್ಟ್ ಚಿಲ್ ಔಟ್ ಎಂದು ಹೇಳಿದ್ದಾರೆೆ.