-->

Mangalore ; 200 ರೂಪಾಯಿಗೆ ಸಿಕ್ಕಿತು 380 ರೂ ಲಾಭ... 5 ಲಕ್ಷ ಹೂಡಿಕೆ ಮಾಡಿದಾಗ ಏನಾಯಿತು ಗೊತ್ತಾ?

Mangalore ; 200 ರೂಪಾಯಿಗೆ ಸಿಕ್ಕಿತು 380 ರೂ ಲಾಭ... 5 ಲಕ್ಷ ಹೂಡಿಕೆ ಮಾಡಿದಾಗ ಏನಾಯಿತು ಗೊತ್ತಾ?


ಮಂಗಳೂರು; 200 ರೂಪಾಯಿ ಹೂಡಿಕೆ ಮಾಡಿದಾಗ ವ್ಯಕ್ತಿ ಯೊಬ್ಬರಿಗೆ‌ ಲಾಭಂಶ ಎಂದು ಒಂದೇ ದಿನದಲ್ಲಿ 380 ರೂ ಸಿಕ್ಕಿದ್ದು , ಇದನ್ನು ನಂಬಿ 5 ಲಕ್ಷ ಕಳೆದುಕೊಂಡಿದ್ದಾರೆ.

ಮಂಗಳೂರಿನ ವ್ಯಕ್ತಿ ಯೊಬ್ಬರಿಗೆ  26/11/2021 ರಂದು  ಮೊಬೈಲ್ ಸಂಖ್ಯೆ  ಗೆ ಯಾರೋ ಅಪರಿಚಿತ ವ್ಯಕ್ತಿಯು ಪಾರ್ಟ್ ಟೈಮ್  ಜಾಬ್ ಗೆ ಆಯ್ಕೆಯಾಗಿರುವುದಾಗಿ ಒಂದು ಸಂದೇಶ ಕಳುಹಿಸಿದ್ದರು. ಈ  ಸಂದೇಶ ದಲ್ಲಿ ಒಂದು  ಲಿಂಕ್ LINK-Wa.me/918675186814sacc ಬಂದಿದ್ದು  ಆದರಂತೆ ಇವರು ಲಿಂಕ್ ಕ್ಲಿಕ್ ಮಾಡಿ  +918675186814 ನೇ ನಂಬ್ರದ whatsapp ವ್ಯಕ್ತಿಯೊಂದಿಗೆ ಪಾರ್ಟ್ ಟೈಮ್  ಆನ್ ಲೈನ್ ಜಾಬ್ ನ ವಿಷಯವಾಗಿ ಚಾಟ್ ಮಾಡಿದ್ದಾರೆ. 

 job ನ ಸಂಪೂರ್ಣ ಮಾಹಿತಿಗಳನ್ನು ತಿಳಿಯಲು ಅಪರಿಚಿತ ವ್ಯಕ್ತಿಯು ಒಂದು ಟೆಲಿಗ್ರಾಮ್ ಲಿಂಕ್ ಕಳುಹಿಸಿರುತ್ತಾರೆ https://telegram.org/  ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ Flipkart online-mall ಎಂಬ ಹೆಸರಿನ ಟೆಲಿಗ್ರಾಮ್ ನಲ್ಲಿ   job ನವಿಷಯವಾಗಿ ಚಾಟ್ ಮಾಡಿರುತ್ತಾರೆ . ಈ ಸಮಯದಲ್ಲಿ  ಅಪರಿಚಿತ ವ್ಯಕ್ತಿಯು http://ws0888.com  ಟೆಲಿಗ್ರಾಮ್ ಲಿಂಕ್ ಕಳುಹಿಸಿರುತ್ತಾರೆ  . ಲಿಂಕ್ ನ ಮೂಲಕ “ Monster Amazon” ಎಂಬ  website ತೆರೆದಿದ್ದು     account ತೆರೆದು  USER ID, ಹಾಗೂ  password ಕ್ರಿಯೇಟ್ ಮಾಡಿರುತ್ತಾರೆ .

ಆನ್ ಲೈನ್ ನಲ್ಲಿ  Product  Order ಮಾಡಿ ಕಮಿಷನ್ ಗಳಿಸಿಬಹುದೆಂದು ತಿಳಿಸಿದಂತೆ  ದಿನಾಂಕ 05/12/2021 ರಂದು Axis ಬ್ಯಾಂಕ್ ಖಾತೆ ಯಿಂದ 200/- ರೂ ಹೂಡಿಕೆ ಮಾಡಿದ್ದು ನಂತರ  ದಿನಾಂಕ 06/12/2021 ಇವರಿಗೆ ಲಾಭಾಂಶವಾಗಿ ಖಾತೆಗೆ 380/- ರೂಪಾಯಿ ಜಮೆ ಆಗಿತ್ತು. 

ನಂತರದಲ್ಲಿ ಹೆಚ್ಚಿನ ಹಣ ತೊಡಗಿಸಿ ಹೆಚ್ಚಿನ ಲಾಭಗಳಿಸುವ  ಉದ್ದೇಶದಿಂದ ಇವರು ತಮ್ಮ  Axis ಬ್ಯಾಂಕ್ ಖಾತೆಯಿಂದ ದಿನಾಂಕ 06/12/2021ರಂದು  ಅಪರಿಚಿತ ವ್ಯಕ್ತಿಯು ಕಳುಹಿಸಿದ QR CODE ಮೂಲಕ 86,000/- ಹಾಗೂ Canara Bank ಖಾತೆ ನಂಬ್ರ ದರಿಂದ ಅಪರಿಚಿತ ವ್ಯಕ್ತಿಯು ತಿಳಿಸಿದ yes bank ಖಾತೆ ನಂಬ್ರ 708090836496227 ಕ್ಕೆ 50,000/-ರೂ  ಮತ್ತು ದಿನಾಂಕ  07/12/2021  ಅಪರಿಚಿತ ವ್ಯಕ್ತಿಯು  ಕಳುಹಿಸಿದ QR CODE ಗೆ 30,000/- ಹಾಗೂ  yes bank ಖಾತೆ ನಂಬ್ರ 708090836496227 ಕ್ಕೆ 1,50,000/-  ಹಾಗೂ ದಿನಾಂಕ 07/12/2021 ವ್ಯಕ್ತಿಯು ಕಳುಹಿಸಿದ QR CODE ಮೂಲಕ 20,000/-  ಹಾಗೂ ಆರೋಪಿಯ ICICI BANK ಖಾತೆ ನಂಬ್ರ 615701504908 ನೇದಕ್ಕೆ 1,95,000/- ವರ್ಗಾಯಿಸಿರುತ್ತಾರೆ‌.

  ಹೀಗೆ  ಅಪರಿಚಿತ ವ್ಯಕ್ತಿಯು ತಿಳಿಸಿದ yes bank, ICICI BANK ಹಾಗೂ QR CODE SCAN ಮೂಲಕ  ಹಂತ ಹಂತವಾಗಿ ಇವರು ಒಟ್ಟು 5,31,200/- ಹಣವನ್ನು ವರ್ಗಾಯಿಸಿರುತ್ತಾರೆ ಅದರೆ   ಯಾವುದೇ ಲಾಭವನ್ನು ನೀಡದೆ ಹಾಗೂ ಹಣವನ್ನು ಪಾವತಿ ಮಾಡದೆ ಮೋಸ ಮಾಡಿರುವುದು ತಿಳಿದ ಬಳಿಕ ಇದೀಗ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99