ಬ್ಲ್ಯಾಕ್ ಬಾಕ್ಸ್ ( BLACK BOX) ಎಂದರೇನು? ಅದು ನಾಶವಾಗದೇ ಉಳಿಯುವುದು ಹೇಗೆ ?
Friday, December 10, 2021
ಯಾವುದೇ ವೈಮಾನಿಕ ಅಪಘಾತವಾದಾಗ ಬ್ಲ್ಯಾಕ್ ಬಾಕ್ಸ್ ಬಗ್ಗೆ ಚರ್ಚೆಗಳಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಎಂದರೆ ಏನು? ವಿಮಾನಅಪಘಾತವಾದಾಗ ಅದು ನಾಶವಾಗದೆ ಉಳಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ
ವಿಮಾನಗಳಲ್ಲಿ ಇರುವ ಬ್ಲ್ಯಾಕ್ ಬಾಕ್ಸ್ ಸರಿ ಸುಮಾರು 1.5 ಕೆಜಿ ಇದ್ದು ಅದರಲ್ಲಿ ಚಾಸಿಸ್ , ನೀರಿನೊಳಗೆ ಮಿನುಗುವ ದೀಪ , ಅಪಘಾತವನ್ನು ತಾಳಿಕೊಳ್ಳುವ ಮೆಮೊರಿ ಯುನಿಟ್ ಗಳು ಇರುತ್ತದೆ . ಚಾಸಿಸ್‌ನಲ್ಲಿ ವಿಮಾನದ ಒಳಗಿನ ಪ್ರತಿಯೊಂದು ಅಂಶವೂ ದಾಖಲು ಆಗಿ ಮತ್ತು ಅಪಘಾತವಾದ ಬಳಿಕ ಅದನ್ನು ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ . ವಿಮಾನ ಸಮುದ್ರ ವ್ಯಾಪ್ತಿಯಲ್ಲಿ ಅಪಘಾತವಾದರೆ
ನೀರಿನೊಳಗೆ ಮಿನುಗುವ ದೀಪದಿಂದ ಕಂಡು ಹಿಡಿಯಲು ನೆರವಾಗುತ್ತದೆ . ಅಪಘಾತ ತಾಳಿಕೊಳ್ಳುವ ಮೆಮೊರಿ ಯುನಿಟ್ ನಲ್ಲಿ ಚಿಪ್‌ಗಳಿಂದ ಕೂಡಿದ ಸರ್ಕಿಟ್ ಬೋರ್ಡ್ ಗಳು ಇದ್ದು ಇದನ್ನು ಸ್ಟೈನ್ ಲೆಸ್ ಸ್ಟೀಲ್ ನಿಂದ ತಯಾರು ಮಾಡಲಾಗಿದ್ದು ಯಾವುದೇ ರೀತಿಯ ಆಘಾತವನ್ನು ತಾಳಿಕೊಳ್ಳುವ ಸಾಮರ್ಥ್ಯ ಇದಕ್ಕೆ ಇರುತ್ತದೆ . ಅದನ್ನು ಬೆಂಕಿ ನೀರಿನಿಂದ ರಕ್ಷಣೆ ಪಡೆಯುವಂತೆ ಸಿದ್ಧಪಡಿಸಲಾಗಿದ್ದು ಭೀಕರ ಅಪಘಾತವಾದಾಗಲೂ ಬ್ಲಾಕ್ ಬಾಕ್ಸ್ ಗೆ ಯಾವುದೆ ಹಾನಿಯಾಗುವುದಿಲ್ಲ.
ಸರ್ಕಿಟ್ ಬೋರ್ಡ್ ಅನ್ನು ಅಲ್ಯುಮಿನಿಯನಿಂದ ಸಿದ್ಧಪಡಿಸಲಾಗಿದ್ದು ಅದು ತುಕ್ಕು ಹಿಡಿಯದಂತೆಯೂ ಇರಲು ನೆರವಾಗುತ್ತದೆ . ಅದು 2. 0.30 ಫ್ಯಾರನ್ ಹೀಟ್ ವರೆಗಿನ ತಾಪವನ್ನು ತಾಳಿಕೊಳ್ಳುತ್ತದೆ. ಅದಕ್ಕೆ ಒಂದು ಇಂಚು ದಪ್ಪ ಇರುವಂತೆ ರಕ್ಷಣ ಕವಚ ವನ್ನು ನಿರ್ಮಿಸಲಾಗುತ್ತದೆ . ಹೀಗಾಗಿ , ವಿಮಾನ ಸ್ಪೋಟಗೊಂಡು ಉರಿದುಹೋಗುವಂಥ ದುರಂತ ಉಂಟಾದರೂ ಬ್ಲ್ಯಾಕ್ ಬಾಕ್ಸ್‌ಗೆ ಯಾವುದೆ ಹಾನಿಯಾಗುವುದಿಲ್ಲ.
ಬ್ಲ್ಯಾಕ್ ಬಾಕ್ಸ್ ಹೆಸರು ಮಾತ್ರ ಬ್ಲ್ಯಾಕ್ ಬಾಕ್ಸ್ ಎಂಬುದಾಗಿದೆಯೆ ಹೊರತು ಅದು ಕಪ್ಪು ಬಣ್ಣದಾಗಿರುವುದಿಲ್ಲ . ಅದರ ಬಣ್ಣ ಕಿತ್ತಳೆ ವರ್ಣದಲ್ಲಿ ಇರುತ್ತದೆ . 1950 ರಲ್ಲಿ ಆಸ್ಟ್ರೇಲಿಯದ ವಿಜ್ಞಾನಿ ಡೇವಿಡ್ ವಾರೆನ್ ಅವರು ಇಂಥ ವ್ಯವಸ್ಥೆಯನ್ನು ರೂಪಿಸಿದರು . ಅದರಲ್ಲಿ ಎರಡು ವಿಭಾಗಗಳು ಇರುತ್ತವೆ . ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ( CAR) ಮತ್ತು ಫೈಟ್ ಡೇಟಾ ರೆಕಾರ್ಡರ್ . ಮೊದಲ ವಿಭಾಗದಲ್ಲಿ ಕಾಕ್‌ಪಿಟ್ ನಲ್ಲಿ ಪೈಲಟ್‌ಗಳು ಮಾತನಾಡಿಕೊಂಡ ವಿವರಗಳು , ಸಂಭಾಷಣೆಗಳು ದಾಖಲಾದರೆ . ಎರಡನೇ ವಿಭಾಗದಲ್ಲಿ ಪ್ರಯಾಣಿಕರು ಇರುವಲ್ಲಿ ಆಗಿದ್ದ ಸಂಭಾಷಣೆ , ಬೆಳವಣಿಗೆಗಳು ದಾಖಲಾಗುತ್ತವೆ
ದುರಂತ ನಡೆದ ಸ್ಥಳದಿಂದ ಪತ್ತೆ ಮಾಡಿದ ಬಳಿಕ ತರಬೇತಿ ಪಡೆದ ತಂತ್ರಜ್ಞರು ಅದರಲ್ಲಿ ದಾಖಲಾಗಿರುವ ಮಾತನಾಡಿರುವ ವಿಚಾರ ಸೇರಿದಂತೆ ಮಾಹಿತಿಯ ಅಧ್ಯಯನ ಮಾಡುತ್ತಾರೆ . ಅದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಡೌನ್ ಲೋಡ್ ಮಾಡಲಾಗುತ್ತದೆ . ಪರಿಣತರಿಂದ ಅದರಲ್ಲಿರುವ ಮಾಹಿತಿ ವಿಶ್ಲೇಷಣೆ ನಡೆಯುತ್ತದೆ.ತನಿಖಾಧಿಕಾರಿಗಳು ಮಾತ್ರ ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲು ಅವಕಾಶ ಇರುತ್ತದೆ .