ಮಂಗಳೂರಿನ ಕಿನ್ನಿಗೋಳಿಯಲ್ಲಿ ಹೆಜ್ಜೇನು ದಾಳಿ- 8 ಮಂದಿ ಆಸ್ಪತ್ರೆಗೆ ದಾಖಲು
Monday, December 20, 2021
ಮಂಗಳೂರು; ಕಿನ್ನಿಗೋಳಿಯಲ್ಲಿ ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿನ್ನಿಗೋಳಿಯ ಮುಖ್ಯರಸ್ತೆ ಮೂರು ಕಾವೇರಿ ರಾಜ್ ಹೆರಿಟೇಜ್ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಈ ದಾಳಿ ನಡೆಸಿದೆ. ಹೆಜ್ಜೇನುಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಇಂದು ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದೆ.
ವಾಕಿಂಗ್ ಹೋಗುತ್ತಿದ್ದವರು ,ಕೆಲಸಕ್ಕೆ ಹೋಗುತ್ತಿದ್ದವರು ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದಾರೆ. 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.