ಈ ದಿನಾಂಕದಲ್ಲಿ ಜನಿಸಿದವರಿಗೆ 2022 ತುಂಬಾ ಲಕ್ಕಿ ವರ್ಷ ಆಗಲಿದೆಯಂತೆ...!!
Saturday, December 25, 2021
ಯಾವುದೇ ತಿಂಗಳ 6, 15 ಮತ್ತು 24 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 6 ಅನ್ನು ಹೊಂದಿರುತ್ತಾರೆ. ಈ ಜನ್ಮ ದಿನದ ಜನರು ಹೊಸ ವರ್ಷದಲ್ಲಿ, ಉದ್ಯೋಗದಲ್ಲಿ ಬಡ್ತಿ ಪಡೆಯುವ ಜೊತೆಗೆ, ಹಣಕಾಸಿನ ಲಾಭದ ಸಾಧ್ಯತೆಗಳಿವೆ.
ಕೆಲಸದ ವಿಚಾರದಲಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿರುವ ಸಹೋದ್ಯೋಗಿಗಳ ಸಹಕಾರ ಪಡೆಯುತ್ತೀರ. ವ್ಯಾಪಾರಸ್ಥರು ಲಾಭ ಗಳಿಸಬಹುದು.
ಪ್ರೇಮ ಜೀವನದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗಬಹುದು. ಸಂಗಾತಿಯೊಂದಿಗೆ ಯಾವುದೋ ವಿಚಾರದಲ್ಲಿ ವಿವಾದ ಉಂಟಾಗಬಹುದು. ವೃತ್ತಿಯಲ್ಲಿ ಸಂಗಾತಿಗೆ ಸಂಪೂರ್ಣ ಬೆಂಬಲ ದೊರೆಯುತ್ತದೆ. ಒಂಟಿ ಜನರ ಬದುಕಿನಲ್ಲಿ ಸಂಗಾತಿ ಆಗಮನವಾಗುವ ಸಾಧ್ಯತೆ ಇದೆ.
2022 ವರ್ಷವು ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ವರ್ಷದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.