-->

15 ವಿದ್ಯಾರ್ಥಿನಿಯರಲ್ಲಿ ಮೈಮುಟ್ಟಿ ಮಾತನಾಡುತ್ತಿದ್ದ  ಶಿಕ್ಷಕನ ಬಂಧನ

15 ವಿದ್ಯಾರ್ಥಿನಿಯರಲ್ಲಿ ಮೈಮುಟ್ಟಿ ಮಾತನಾಡುತ್ತಿದ್ದ ಶಿಕ್ಷಕನ ಬಂಧನ

ಚೆನ್ನೈ : ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಹದಿನೈದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ .

ಇದೇ ಆರೋಪದಲ್ಲಿ ಮತ್ತೊಬ್ಬ ಶಿಕ್ಷಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ . ಮಕ್ಕಳ ಕಲ್ಯಾಣ ಇಲಾಖೆಯಿಂದ ಶಾಲೆಯಲ್ಲಿ ಮಕ್ಕಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿದ ಬಳಿಕ ಗಣಿತ ಹಾಗೂ ಸಮಾಜ ವಿಜ್ಞಾನ ಬೋಧಿಸುವ ಎರಡು ಶಿಕ್ಷಕರು ಎಸಗುತ್ತಿರುವ ದೌರ್ಜನ್ಯದ ಕುರಿತು 9 ಹಾಗೂ 10 ನೇ ತರಗತಿ ಓದುತ್ತಿರುವ 15 ವಿದ್ಯಾರ್ಥಿನಿಯರು ದೂರು ನೀಡಿದ್ದರು. 
ದೂರಿನ ಅನ್ವಯ ಸಮಾಜ ವಿಜ್ಞಾನ ಶಿಕ್ಷಕನನ್ನು ಬಂಧಿಸಲಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಯುತ್ತಿದೆ . ಎರಡು ಶಿಕ್ಷಕರು ಅಶ್ಲೀಲ ಪದಗಳ ಬಳಕೆ , ಮೈ ಮುಟ್ಟಿ ಮಾತನಾಡಿಸುವುದು ಹಾಗೂ ಶಾಲೆ ಬಿಟ್ಟ ಬಳಿಕವೂ ಕರೆ ಮಾಡಿ ಮಾತನಾಡುವುದು ಸೇರಿ ಹಲವು ರೀತಿಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99