ಕರ್ನಾಟಕದಲ್ಲಿ ಪತ್ತೆಯಾಯಿತು ಮತ್ತೊಂದು ಚಿನ್ನದ ಗಣಿ: ಎಲ್ಲಿ ಗೊತ್ತಾ?
Thursday, October 14, 2021
ಕೊಪ್ಪಳ: ಕರ್ನಾಟಕದ ಕೋಲಾರದ ಕೆಜಿಎಫ್‌ನಲ್ಲಿ ಚಿನ್ನದ ಗಣಿ ಇದೆ. ಇದೀಗ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳದಲ್ಲಿ ಮತ್ತೊಂದು ಚಿನ್ನದ ಪತ್ತೆಯಾಗಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ತಿಳಿಸಿದೆ.
ಈ ನಿಟ್ಟಿನಲ್ಲಿ ಇಲ್ಲಿ ಸರ್ವೆ ನಡೆಸಿರುವ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ, ನಾರಿನಾಳ ಗ್ರಾಮದ ಸಮೀಪ 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವಿವರ ನೀಡಿದೆ.