ಉಳ್ಳಾಲ: ಶಿಕ್ಷಕ-ಶಿಕ್ಷಕೇತರರ 'ಸ್ನೇಹ ಸಮ್ಮಿಲನ-2021' ಕಾರ್ಯಕ್ರಮ
ಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ಎಂಸಿಎಚ್ಎ ಜಂಟಿ ಆಶ್ರಯ ದಲ್ಲಿ ಶಿಕ್ಷಕ-ಶಿಕ್ಷಕೇತರರ ಸ್ನೇಹ ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿವೃತ್ತ ಶಿಕ್ಷಕಿ ಎಲ್ಸಿ ಡಿಸೋಜ, ಕರೊನಾ ವಾರಿಯರ್ಸ್ ಗಳಾದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾಸಾಗರ್, ಠಾಣೆಯ ವೃತ್ತ ನಿರೀಕ್ಷಕ ಸಂದೀಪ್ ಪಾಟೀಲ್ ಅವರ ನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾ ಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಫಾ.ಸಿಪ್ರಿಯನ್ ಪಿಂಟೋ ಮಾತನಾಡಿ, ಬೋಧನೆ ಎನ್ನುವುದು ಕೇವಲ ವೃತ್ತಿಯಲ್ಲ, ಮಕ್ಕಳ ಭವಿಷ್ಯ ರೂಪಿಸಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಇರುವುದರಿಂದ ಇದು ದೇವರ ಕೊಡುಗೆಯಾ ಗಿದೆ ಎಂದು ಹೇಳಿದರು.
ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರ ಹಾಸ ಉಳ್ಳಾಲ್ ಮಾತನಾಡಿ, ಶಿಕ್ಷಕರ ಮನೆಯಲ್ಲಿ ಎಷ್ಟೇ ಸಮಸ್ಯೆ, ಮನದಲ್ಲಿ ಬೇಸ ರ ಇದ್ದರೂ ಮನೆಯಿಂದ ಹೊರಬರುವಾಗ ಎಲ್ಲವೂ ದೂರವಾಗಿ ವಿದ್ಯಾರ್ಥಿಗಳ ಭವಿಷ್ಯದ ಚಿಂತೆ ಮಾತ್ರ ಇರುತ್ತದೆ ಎಂದರು.
ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿ, ಕನಿಷ್ಠ ವೇತನದಲ್ಲಿ ದುಡಿಯುತ್ತಿದ್ದರೂ ಮಕ್ಕಳ ಭವಿಷ್ಯ ರೂಪಿ ಸುವ ನಿಟ್ಟಿನಲ್ಲಿ ಕರೊನಾ ಸಂದರ್ಭದಲ್ಲೂ ಶಾಲೆಗೆ ಬರಲು ಶ್ರಮಿಸಿದ ಶಿಕ್ಷಕರ ಹೃದಯ ವಂತಿಕೆ, ಪರಿಶ್ರಮ ಎಂದಿಗೂ ಮರೆಯಲಾಗ ದು. ನಿಮ್ಮ ಪರಿಶ್ರಮಕ್ಕೆ ಚಾರಿಟೇಬಲ್ ಟ್ರಸ್ಟ್ ಅಭಾರಿಯಾಗಿದೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸಂಪನ್ಮೂ ಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಾಜಿ ಸಚಿವ ರಹೀಂ ಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಸಮನ್ವಯಾಧಿಕಾರಿ ಡಾ.ಪ್ರಶಾಂ ತ್ ಕುಮಾರ್, ಸಿಆರ್ ಪಿಗಳಾದ ಲೀಲಾ ಕಿಶೋರಿ, ಮೋಹನ್ ಕುಮಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ನಗರಸಭೆಯ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿ ಲ, ದರ್ಗಾ ಆಡಳಿತ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಮೋನು, ಬಾವ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಕೋಶಾಧಿಕಾರಿ ಹಮೀದ್ ಕಲ್ಲಾಪು, ಸದಸ್ಯ ಅಲಿಮೋನು, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆತೋಟ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಅಮೀರ್ ಕಲ್ಲಾಪು, ಜತೆಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಹಮೀದ್ ಕೋಡಿ, ಹನೀಫ್ ಕೋಡಿ, ಹಸನಬ್ಬ ಉಳ್ಳಾಲ್, ಹಮ್ಮಬ್ಬ ಉಳ್ಳಾಲಬೈಲ್, ಇಬ್ರಾಹಿಂ ಉಳ್ಳಾಲಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದ ರು. ಪ್ರಧಾನ ಕಾರ್ಯದರ್ಶಿ ಎ.ಕೆ.ಮೊಯಿದ್ದೀ ನ್, ವಂದಿಸಿದರು. ಶಿಕ್ಷಕ ರಹ್ಮಾನ್ ಮತ್ತು ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.