
ಕಾರಿಂಜದಲ್ಲಿ ಉದಯಶಂಕರ ಭಟ್ಟ ಮಜಲು ಅವರ ನೇತೃತ್ವದಲ್ಲಿ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ
ಕುಂಬಳೆ ಇಚ್ಲಂಪಾಡಿ ಸಮೀಪದ ಕಾರಿಂಜ ಮಹಾದೇವ ದೇವಸ್ಥಾನದ ವಠಾರದಲ್ಲಿ ಕನ್ಯಾ ಸಂಕ್ರಮಣದ ಪ್ರಯುಕ್ತ ವಿರಾಮ ಯಕ್ಷಬಳಗದವರಿಂದ ಉದಯಶಂಕರ ಭಟ್ಟ ಮಜಲು ಅವರ ನೇತೃತ್ವದಲ್ಲಿ ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.
ಭಾಗವತರಾಗಿ ಬೇಂದ್ರೋಡಿ ಗೋವಿಂದ ಭಟ್ ಮತ್ತು ಉದಯಶಂಕರ ಪಟ್ಟಾಜೆ, ಹಿಮ್ಮೇಳದಲ್ಲಿ ವೇಣುಗೋಪಾಲ ಬರೆಕರೆ ಮತ್ತು ಆದಿತ್ಯ ಬರೆಕರೆ, ಶ್ರೀರಾಮನಾಗಿ ಗಣೇಶ್ ಪ್ರಸಾದ್ ಕಡಪು, ವಾಲಿಯಾಗಿ ಉದಯಶಂಕರ ಭಟ್ಟ ಮಜಲು, ಹನುಮಂತನಾಗಿ ಶಿವರಾಮ ಭಂಡಾರಿ ಇಚ್ಲಂಪಾಡಿ, ತಾರೆಯಾಗಿ ಶ್ರೀಶಕುಮಾರ ಪಂಜಿತ್ತಡ್ಕ ಹಾಗೂ ಸುಗ್ರೀವನಾಗಿ ಗುರುಮೂರ್ತಿ ನಾಯ್ಕಾಪು ಸಹಕರಿಸಿದರು. ನಿವೃತ್ತ ಮುಖ್ಯಶಿಕ್ಷಕ ವಿಶ್ವನಾಥ ರೈ ಸ್ವಾಗತಿಸಿ ಸತೀಶ ಭಟ್ ಯೆಯ್ಯೂರು ವಂದಿಸಿದರು.