-->

ಮದುವೆಯಾಗ್ತೀನಿ ಎಂದು ನಂಬಿಸಿ ಯುವತಿಯಿಂದ ಹಣ ಪಡೆದು ಎಸ್ಕೇಪ್..!! ಕೊನೆಗೆ....

ಮದುವೆಯಾಗ್ತೀನಿ ಎಂದು ನಂಬಿಸಿ ಯುವತಿಯಿಂದ ಹಣ ಪಡೆದು ಎಸ್ಕೇಪ್..!! ಕೊನೆಗೆ....

 ಮಂಗಳೂರು: ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ ​ ಯುವಕನೊಬ್ಬ ನಾನು ಸಿವಿಲ್ ಇಂಜಿನಿಯರ್ ಎಂದು ವಧು ಹುಡುಕಲು ಪ್ರೊಪೈಲ್​ ಹಾಕಿಕೊಂಡಿದ್ದ. ಹಾಗೆಯೇ ಹಲವು ಯುವತಿಯರಿಗೆ ಮದುವೆ ಪ್ರಸ್ತಾಪ ಕಳಿಸಿದ್ದ. ಇದೇ ತರ ಮಹಿಳೆಯರಿಗೆ ಮದುವೆ ಪ್ರಸ್ತಾಪ ಕಳಿಸಿ ಆಮೇಲೆ ಖತರ್ನಾಕ್ ಕೆಲಸಗಳನ್ನು ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.

 ವಿಜಯಪುರ ಮೂಲದ ಜಗನ್ನಾಥ್(34) ಆರೋಪಿ. ಈತ  ತಾನು ಉಳ್ಳಾಲದ ನಿವಾಸಿಯೆಂದು ಹೇಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುರತ್ಕಲ್​ನ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. ನಾನು ಮನೆ ಖರೀದಿಸುತ್ತಿರುವೆ. ಸ್ವಲ್ಪ ಹಣದ ಕೊರತೆ ಇದೆ ಎಂದು ಹೇಳಿ, ಆ ಯುವತಿ ಬಳಿ 3 ಲಕ್ಷ ರೂ. ಸಾಲ ಕೇಳಿದ್ದ. 
 ಆಕೆ ತನ್ನ ಚಿನ್ನವನ್ನು ಫೈನಾನ್ಸ್​ನಲ್ಲಿ ಅಡವಿಟ್ಟು ಹಣ ನೀಡಿದ್ದಳು. ಇದರಲ್ಲಿ ಒಂದೂವರೆ ಲಕ್ಷ ರೂ. ಮರಳಿಸಿದ್ದ. ಸ್ವಲ್ಪ ದಿನಗಳ ನಂತರ ನಂಬಿಸಿ ಆ ಹಣವನ್ನೂ ಆಕೆಯಿಂದ ವಾಪಸ್ ಪಡೆದಿದ್ದ. ಬಳಿಕ ಜಗನ್ನಾಥ್ ನಾಪತ್ತೆಯಾಗಿದ್ದ.

  ಯುವತಿ ಈ ಬಗ್ಗೆ ಹೆಣ್ಣೂರು ಠಾಣೆಗೆ ದೂರು ನೀಡಿದ್ದಳು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ, ಈತ ಇದೇ ರೀತಿ ಹಲವು ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಎಂಬುದು ಬಯಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99