
ಇಬ್ಬರನ್ನು ಪ್ರೀತಿಸಿದ ಯುವಕನಿಂದ ಟಾಸ್ ಮೂಲಕ ಒಬ್ಬಳ ಆಯ್ಕೆ- ಮುಂದೇನಾಯಿತೆಂದರೆ....
Sunday, September 5, 2021
ಹಾಸನ: ಯುವಕನೊಬ್ಬ ಇಬ್ಬರು ಹುಡುಗಿಯರನ್ನು ಪ್ರೀತಿಸಿ ಕೊನೆಗೆ ಇಬ್ಬರ ಕೈಯಲ್ಲೂ ಸರಿಯಾಗಿ ಸಿಕ್ಕಾಕಿಕೊಂಡು ನಂತರ ಲಾಟರಿ ಎತ್ತುವ ಮೂಲಕ ಒಬ್ಬಳನ್ನು ಮದುವೆಯಾಗಿರುವ ವಿಚಿತ್ರ ಪ್ರೇಮ ಪಕರಣ ಹಾಸನದಲ್ಲಿ ಬೆಳಕಿಗೆ ಬಂದಿದೆ.
ಸಕಲೇಶಪುರ ಮೂಲದ ಯುವಕ ಇಬ್ಬರು
ಯುವತಿಯರನ್ನು ಪ್ರೀತಿಸುತ್ತಿದ್ದ. ಕೊನೆಗೆ ಯುವಕ ಇಬ್ಬರ ಕೈಯಲ್ಲೂ ಸಿಕ್ಕಿಬಿದ್ದ. ಇತ್ತ ಆತನನ್ನು ಬಿಟ್ಟು ಕೊಡಲು ಒಪ್ಪದ ಯುವತಿಯರಿಬ್ಬರು ತನ್ನನ್ನೇ ಮದುವೆಯಾಗುವಂತೆ ಪಟ್ಟುಹಿಡಿದರು. ಇದರ ನಡುವೆ ಓರ್ವ ಯುವತಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊನೆಗೆ ಇದನ್ನು ಬಗೆಹರಿಸಲು ಕುಟುಂಬಸ್ಥರು ಮುಂದಾದರು. ಮಾತುಕತೆ ಮೂಲಕ ಪರಿಹಾರ ಸಿಗದಿದ್ದಾಗ ಲಾಟರಿ ಎತ್ತುವ ಮೂಲಕ ಯುವತಿ ಆಯ್ಕೆಗೆ ಮುಂದಾದರು. ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಜತೆ ಮದುವೆ ಎಂದು ನಿರ್ಧಾರ ಮಾಡಿದರು. ಲಾಟರಿ ಎತ್ತಲು ಮುಂದಾಗುತ್ತಿದ್ದಂತೆ ಅದನ್ನು ತಡೆದ ಯುವಕ ವಿಷ ಸೇವಿಸಿದ್ದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ.
ಯುವಕನ ಹೇಳಿಕೆಯಿಂದ ಸಿಟ್ಟಿಗೆದ್ದ ಮತ್ತೊರ್ವ ಯುವತಿ, ಆತನ ಕೆನ್ನೆಗೆ ಬಾರಿಸಿದ್ದಾಳೆ. ಮೋಸ ಹೋದ ಯುವತಿ, ಪ್ರೀತಿಯ ನಾಟಕ ವಾಡಿದ ಯುವಕನನ್ನು ಯಾವುದೇ ಕಾರಣಕ್ಕು ಬಿಡಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.