
8 ತಿಂಗಳು ಲಾಡ್ಜ್ ನಲ್ಲಿ ಹಣ ಕೊಡದೆ ವಾಸ್ತವ್ಯ ಮಾಡಿದ ಈತ ಕೊನೆಗೆ ಮಾಡಿದ್ದೇನು ಗೊತ್ತಾ?
Friday, September 3, 2021
ಮುಂಬೈ: ಮಹಾರಾಷ್ಟ್ರದ ನವಿ ಮುಂಬೈ ಹೊಟೇಲ್ನಲ್ಲಿ ಸುಮಾರು 8 ತಿಂಗಳುಗಳ ಕಾಲ ವ್ಯಕ್ತಿಯೊಬ್ಬ ತಂಗಿದ್ದು, ಕೊನೆಗೆ 25 ಲಕ್ಷ ರೂ. ಬಿಲ್ ಪಾವತಿ ಮಾಡದೆ ಪರಾರಿಯಾಗಿರುವ ಘಟನೆ ನಡೆದಿದೆ.
ಅಂಧೇರಿ ನಿವಾಸಿ ಮುರಳಿ ಕಾಮತ್ ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಖಾರ್ಘರ್ ಪ್ರದೇಶದ ಹೊಟೇಲ್ ತ್ರೀ-ಸ್ಟಾರ್ ಸಿಬ್ಬಂದಿಗೆ ಹೇಳುವ ಮೂಲಕ ಎರಡು ಕೊಠಡಿಗಳನ್ನು ಬುಕ್ ಮಾಡಿದ್ದಾನೆ. ಅಲ್ಲದೇ ತನ್ನ 12 ವರ್ಷದ ಮಗನೊಂದಿಗೆ ನವೆಂಬರ್ 23 ರಿಂದ ಹೊಟೇಲ್ನಲ್ಲಿ ಉಳಿದುಕೊಂಡಿದ್ದಾನೆ. ಕಳೆದ 8 ತಿಂಗಳ 25 ಲಕ್ಷ ರೂ. ಬಿಲ್ ನೀಡದೆ ತನ್ನ ಕೊಠಡಿ ಬಾತ್ರೂಂ ಕಿಟಕಿ ಹಾರಿ ಎಸ್ಕೇಪ್ ಆಗಿದ್ದಾನೆ. ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಕೋಣೆಯಲ್ಲಿ ಬಿಟ್ಟಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಹೊಟೇಲ್ನವರು ಈತನ ವಿರುದ್ದ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.