-->

ಶೂಟಿಂಗ್ ವೇಳೆ ತ್ರಿಶಾ ಎಡವಟ್ಟು.. ಎದುರಾಗಿದೆ ಬಂಧನದ ಭೀತಿ..!

ಶೂಟಿಂಗ್ ವೇಳೆ ತ್ರಿಶಾ ಎಡವಟ್ಟು.. ಎದುರಾಗಿದೆ ಬಂಧನದ ಭೀತಿ..!

 ಚೆನ್ನೈ:  ತ್ರಿಶಾ ತಮ್ಮ ಮುಂದಿನ ಹೈಬಜೆಟ್​ ಚಿತ್ರ “ಪೊನ್ನಿನ್ ಸೆಲ್ವನ್” ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. 
ಚಿತ್ರೀಕರಣ ಸಮಯದಲ್ಲಿ ತ್ರಿಶಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಬಂಧನದ ಭೀತಿ ಎದುರಾಗಿದ್ದು. 

ತಮಿಳುನಾಡಿನ ಹಿಂದು ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಪೊನ್ನಿನ್ ಸೆಲ್ವನ್ ಚಿತ್ರವನ್ನು ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟ್​ ಮಾಡಲಾಗುತ್ತಿದೆ. ತ್ರಿಶಾರ ಮಹತ್ವದ ಪಾತ್ರಗಳನ್ನು ಸೆರೆಹಿಡಿಯಲಾಗುತ್ತಿದೆ. ಶೂಟಿಂಗ್​ ಗ್ಯಾಪ್​ನಲ್ಲಿ ನಟಿ ತ್ರಿಶಾ ಚಪ್ಪಲಿ ಹಾಕಿಕೊಂಡೆ ದೇವಸ್ಥಾನದ ಒಳಗೆ ಓಡಾಡಿದ್ದಾರೆ. ಶಿವಲಿಂಗ ಮತ್ತು ನಂದಿಯ ನಡುವೆ ತ್ರಿಶಾ ಚಪ್ಪಲಿ ಹಾಕಿಕೊಂಡು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಿಂದು ಸಂಘಟನೆಗಳು ಧಾರ್ಮಿಕ ಭಾವನೆಗೆ ಧಕ್ಕೆ ತಂದೆ ತ್ರಿಶಾರನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99