-->

 ಮಹಿಳಾ ಪಾಲಿಟೆಕ್ನಿಕ್ ನಿಂದ ಅರ್ಜಿ ಆಹ್ವಾನ

ಮಹಿಳಾ ಪಾಲಿಟೆಕ್ನಿಕ್ ನಿಂದ ಅರ್ಜಿ ಆಹ್ವಾನ


ಮಂಗಳೂರು :- ಇಲ್ಲಿನ ಬೊಂದೇಲ್‍ನಲ್ಲಿರುವ ಸರಕಾರಿ ಮಹಿಳಾ ಪಾಲಿಟಕ್ನಿಕ್‍ನಲ್ಲಿ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲಿಷ್ ಮತ್ತು ಕನ್ನಡ) ಹಾಗೂ ಲೈಬ್ರರಿ ಅಂಡ್ ಇನ್‍ಫರ್ಮೇಷನ್ ಸೈನ್ಸ್ ಕೋರ್ಸ್‍ನ ಪ್ರಥಮ ವರ್ಷದ ಡಿಪ್ಲಮೋ ಪ್ರವೇಶಕ್ಕೆ ಉಳಿದಿರುವ ಸೀಟುಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಡಿಪ್ಲಮೋ ಕೋರ್ಸ್ ಪ್ರವೇಶಕ್ಕೆ 2 ವರ್ಷಗಳ ಐಟಿಐ ಅಥವಾ ದ್ವಿತೀಯ ಪಿಯುಸಿ (ವಿಜ್ಞಾನ) ಅಥವಾ ತಾಂತ್ರಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವವರು ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
 ಮೊದಲು ಬಂದವರಿಗೆ ಆದ್ಯತೆ. ಅರ್ಜಿ ಪಡೆಯಲು ಹಾಗೂ ಭರ್ತಿ ಮಾಡಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. 2021ರ ಸೆ.30ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ: 0824-2482334/9448869332/9480744667 ಸಂಪರ್ಕಿಸುವಂತೆ ಸರಕಾರಿ ಮಹಿಳಾ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99