ಹಾಡುಹಗಲೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಒಳನುಗ್ಗಿ 3 ಮಹಿಳೆಯರನ್ನು ಮಾರಾಕಾಸ್ತ್ರದಿಂದ ಹತ್ಯೆಗೆ ದಾಳಿ ನಡೆಸಿದ ಅಮಾನವೀಯ ಕೃತ್ಯ ಖಂಡನೆ - ಆರೋಪಿಗೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಆಗ್ರಹ - ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ
Monday, September 20, 2021
ಹಾಡುಹಗಲೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಒಳನುಗ್ಗಿ ನಿರ್ಮಲ, ರೀನಾ ರಾಯ್ ಮತ್ತು ಗುಣಾವತಿಯವರ ಮೇಲೆ ಎಕಾಏಕಿ ತಲವಾರಿನಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಅಮಾನವೀಯ ಕೃತ್ಯವನ್ನು ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ಖಂಡಿಸುತ್ತದೆ ಅಲ್ಲದೆ ಆರೋಪಿಯ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸುತ್ತದೆ. ವಿಭಾಗ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್, ಜಿಲ್ಲಾ ದುರ್ಗಾವಾಹಿನಿ ಸಂಯೋಜಕಿ ಶ್ವೇತ ಅದ್ಯಪಾಡಿ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖಿ ಚೇತನಾ ಬಜ್ಜೋಡಿ ಆಸ್ಪತ್ರೆಗೆ ಭೇಟಿನೀಡಿ ನಿರ್ಮಲ ಮತ್ತು ರೀನಾ ರಾಯ್ ಆರೋಗ್ಯ ವಿಚಾರಿಸಿ ಮನೆಯವರಿಗೆ ಧೈರ್ಯ ತುಂಬಿದರು. ಮಹಿಳೆಯರಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ತರಚಿಸಬೇಕು ಅಲ್ಲದೆ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ವಿಭಾಗ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ