-->

ತ್ರಿಷಾ ಕರ್​ ಮಧು ಬೆನ್ನಲ್ಲೇ ಮತ್ತೋರ್ವ ಭೋಜ್​ಪುರಿ ನಟಿಯ ಖಾಸಗಿ‌ ವೀಡಿಯೋ ವೈರಲ್

ತ್ರಿಷಾ ಕರ್​ ಮಧು ಬೆನ್ನಲ್ಲೇ ಮತ್ತೋರ್ವ ಭೋಜ್​ಪುರಿ ನಟಿಯ ಖಾಸಗಿ‌ ವೀಡಿಯೋ ವೈರಲ್

ನವದೆಹಲಿ: ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಖಾಸಗಿ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಬ್ಬ ಭೋಜ್​ಪುರಿ ನಟಿ ನಟಿ ಪ್ರಿಯಾಂಕಾ ಪಂಡಿತ್ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ತ್ರಿಷಾ ಕರ್​ ಮಧು ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ಟ್ರೋಲ್​ ಆಗಿರುವ ಬೆನ್ಮಲ್ಲೇ ಮತ್ತೋರ್ವ ನಟಿ ಪ್ರಿಯಾಂಕ ಪಂಡಿತ್​ ವೀಡಿಯೋ ಕೂಡ ಟ್ರೋಲಿಗರ ಆಹಾರವಾಗಿದೆ. 

ವೈರಲ್​ ಆಗಿರುವ ಪ್ರಿಯಾಂಕಾ ಪಂಡಿತ್ಗ ಈ ವೀಡಿಯೋ ಹಳೆಯದ್ದೆಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿರುವ ನಟಿ, ನನ್ನ ಹೆಸರು, ಕೆರಿಯರ್ ಅನ್ನು ಹಾಳು ಮಾಡುವ ಉದ್ದೇಶದಿಂದ ಈ ವೀಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ಅದಲ್ಲದೆ ಈ ವೀಡಿಯೋದಲ್ಲಿ ಇರುವುದು ನಾನಲ್ಲ. ದುರುದ್ದೇಶದಿಂದಲೇ ಎಡಿಟ್​ ಮಾಡಿ ವೀಡಿಯೋ ವೈರಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ಕೂಡಾ ದಾಖಲಿಸಿದ್ದಾರೆ. 

ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಎಂಎಂಎಸ್​ ಲಿಂಕ್​ನ ಮೂಲವನ್ನು ಹುಡುಕುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವೀಡಿಯೋಗಳನ್ನು ತೆಗೆದು ಹಾಕುತ್ತಿದ್ದಾರೆ.

2013ರಲ್ಲಿ ತೆರೆಕಂಡ “ಜೀನಾ ತೇರಿ ಗಾಳಿ ಮೈನ್​” ಸಿನಿಮಾ ಮೂಲಕ ಪ್ರಿಯಾಂಕಾ ಪಂಡಿತ್ ಭೋಜ್​ಪುರಿ ಸಿನಿಮಾ ರಂಗವನ್ನು ಪ್ರವೇಶಿಸಿದರು. ಪವನ್​ ಪುತ್ರ, ಇಚ್ಛಾಧಾತಿ, ಅವರ ಬಲಮ್​, ಕರಮ್​ ಯುಗ್​ ಮತ್ತು ತೊಡ್​ ಡೆ ದುಶ್ಮನ್​ ಕಿ ನಲಿ ರಾಮ್​ ಔರ್​ ಅಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99