ಪುತ್ತೂರು: ಕಚೇರಿ ಟೈಪಿಸ್ಟನ್ನು ಹಿಂಬದಿಯಿಂದ ತಬ್ಬಿಕೊಂಡ ವಕೀಲ; ಮುಂದೇನಾಯಿತೆಂದರೆ....
Saturday, August 21, 2021
ಮಂಗಳೂರು: ಟೈಪಿಸ್ಟ್ ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ವಕೀಲನೊಬ್ಬನ ಮೇಲೆಯೇ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲದ ವಿಎಚ್ ಕಾಂಪ್ಲೆಕ್ಸ್ ನಲ್ಲಿರುವ ವಕೀಲ ಉಮ್ಮರ್ ಕೆ. ಲೈಂಗಿಕ ಕಿರುಕುಳ ನೀಡಿದಾತ.
ಸಂತ್ರಸ್ತ ಯುವತಿ ಕಳೆದ ಒಂಬತ್ತು ತಿಂಗಳಿನಿಂದ ವಕೀಲ ಉಮ್ಮರ್ ಕೆ. ಕಚೇರಿಯಲ್ಲಿ ಕಂಪ್ಯೂಟರ್ ಟೈಪಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗಸ್ಟ್ 16ರಂದು ಸಂಜೆ ವೇಳೆ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಸಂತ್ರಸ್ತೆಯ ಮೈಮುಟ್ಟಿ, ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಇದರಿಂದ ಬೆದರಿದ ಆಕೆ ವಕೀಲ ಉಮ್ಮರ್ ನನ್ನು ತಳ್ಳಿ ಈ ವಿಚಾರವನ್ನು ಮನೆಯಲ್ಲಿ ತಿಳಿಸುವುದಾಗಿ ಹೇಳಿದ್ದಾಳೆ.
ಇದಕ್ಕೆ ಆತ "ಈ ವಿಚಾರವನ್ನು ಮನೆಯಲ್ಲಿ ಹೇಳಬೇಡ. ಹೇಳಿದರೆ ನಿನ್ನ ಮರ್ಯಾದೆ ಹೋಗುತ್ತದೆ" ಎಂದು ಹೆದರಿಸಿದ್ದಾನೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.