-->

ಮದುವೆ ಬಂದೇ ಬರುವೆನೆಂದು ಹೇಳಿ ಹೋಗದವನ ಮನೆಗೆ ಮದುಮಗಳಿಂದಲೇ ಬಂತು ಊಟದ ಬಿಲ್!

ಮದುವೆ ಬಂದೇ ಬರುವೆನೆಂದು ಹೇಳಿ ಹೋಗದವನ ಮನೆಗೆ ಮದುಮಗಳಿಂದಲೇ ಬಂತು ಊಟದ ಬಿಲ್!

ನವದೆಹಲಿ: ಮದುವೆ ಪಾರ್ಟಿಗೆ  ಬಂದೇ ಬರುವೆನೆಂದು ಹೇಳಿ ಬಳಿಕ‌ ಹೋಗಲಾಗದಿರುವ ಸಂದರ್ಭ ಬಹಳಷ್ಟು ಸಲ ಇರುತ್ತದೆ.  ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಬರುತ್ತೇವೆ ಎಂದು  ಸುಳ್ಳು ಹೇಳಿದರೆ, ಇನ್ನು ಕೆಲವೊಮ್ಮೆ ಯಾವುದೋ ಕಾರಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಮದುವೆಗೆ ಬರುತ್ತೇವೆ ಎಂದು ಹೇಳಿ ಹೋಗಲಾಗದವನ ಮನೆಗೆ ಊಟದ ಬಿಲ್ ಪಾವತಿ ಮಾಡಬೇಕೆಂದು ರಸೀದಿಯೊಂದು ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ‌.

ವ್ಯಕ್ತಿಯೋರ್ವರು ತಮ್ಮ ಪತ್ನಿಯ ಸಂಗಡ ಮದುವೆಯ ಪಾರ್ಟಿಯೊಂದಕ್ಕೆ ಬಂದೇ ಬರುವುದಾಗಿ ವಾಗ್ದಾನ ಮಾಡಿದ್ದರು. ಕೋವಿಡ್ ಕಾರಣದಿಂದ ಈ ಮದುವೆ ಪಾರ್ಟಿಗೆ ಎಷ್ಟು ಜನ ಬರುವರೋ ಅಷ್ಟು ಮಂದಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ವ್ಯಕ್ತಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಮದುಮಗಳು ಈ ವ್ಯಕ್ತಿಗೆ ಆತನ ಹಾಗೂ ಆತನ ಪತ್ನಿಯ ಪಾಲಿನ ಭೋಜನಕ್ಕೆ ಆಗುವ ಖರ್ಚು ವಿಧಿಸುವಂತೆ $240 (ಸುಮಾರು 17,700 ರೂ.) ಬಿಲ್‌ ಕಳುಹಿಸಿಕೊಟ್ಟಿದ್ದಾಳೆ. ಇದರಲ್ಲಿ ತಲಾ $120ರಂತೆ ಇಬ್ಬರಿಗೆ ಡಿನ್ನರ್‌ ವ್ಯವಸ್ಥೆಗೆ ಇಷ್ಟು ಖರ್ಚಾಗಿದೆ ಎಂದು ಇನ್‌ವಾಯ್ಸ್‌ನಲ್ಲಿ ಷರಾ ಬರೆಯಲಾಗಿದೆ. 

“ನೀವು ಬರುತ್ತೇವೆ ಎಂದು ಹೇಳಿದ ಕಾರಣದಿಂದ ನಿಮ್ಮ ಸೀಟುಗಳನ್ನು ಬುಕ್‌ ಮಾಡಲಾಗಿತ್ತು. ನೀವು ಬರುವುದಿಲ್ಲ ಎಂದು ನಮಗೆ ಮೊದಲೇ ಫೋನ್ ಮಾಡಿ ತಿಳಿಸಲಿಲ್ಲ. ಆದ್ದರಿಂದ ನಿಮ್ಮ ಬಿಲ್‌ ನಾವು ಪಾವತಿಸಲು ಸಾಧ್ಯವಾಗವುದಿಲ್ಲ. ನೀವೇ ಅದನ್ನು ಪಾವತಿಸಬೇಕಿದೆ’ ಎಂದು ಅದರಲ್ಲಿ ಬರೆಯಲಾಗಿದೆ. “ನೀವು ಪೇಪಾಲ್ ಅಥವಾ ಜೆಲ್ಲೆ ಆ್ಯಪ್‌ ಮೂಲಕ ಪಾವತಿ ಮಾಡಬಹುದು. ಹೇಗೆ ಪಾವತಿ ಮಾಡಲು ಇಚ್ಚಿಸುವಿರಿ ಎಂದು ಮೊದಲೇ ನಮಗೆ ತಿಳಿಸಿದರೆ ಅದನ್ನು ನೋಡಲು ಅನುಕೂಲ ಆಗುತ್ತದೆ’ ಎಂದು ಬಿಲ್‌ ಜತೆಗಿರುವ ಚೀಟಿಯಲ್ಲಿ ಬರೆಯಲಾಗಿದ್ದು, ಅದೀಗ ವೈರಲ್‌ ಆಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99