ಅಪ್ರಾಪ್ತ ಬಾಲಕಿಯ ಕೈಹಿಡಿದು ಪ್ರಪೋಸ್ ಮಾಡಿದ್ರೇ ಲೈಂಗಿಕ ದೌರ್ಜನ್ಯವಾಗುತ್ತಾ..? ಈ ಬಗ್ಗೆ ಕೋರ್ಟ್ ಏನು ಹೇಳಿದೆ ಗೊತ್ತಾ..
Thursday, August 5, 2021
ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ವಿಚಾರಣೆ ವೇಳೆ ಮುಂಬೈನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ (ಪೋಕ್ಸೊ) ಕೋರ್ಟ್ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ.
ಬಾಲಕಿಯ ಕೈಯನ್ನು ಹಿಡಿದು ಪ್ರೀತಿಯನ್ನು ವ್ಯಕ್ತಪಡಿಸಿದ ಕಾರಣಕ್ಕೆ ಅದು ಲೈಂಗಿಕ ದೌರ್ಜನ್ಯ ವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಲಕಿಯ ಕೈಯನ್ನು ಹಿಡಿದು ಪ್ರೀತಿಯನ್ನು ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2017ರಲ್ಲಿ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಆದರೆ ಈತ ದುರುದ್ದೇಶಪೂರ್ವಕವಾಗಿ ಬಾಲಕಿಯ ಕೈಹಿಡಿದಿರುವ ಬಗ್ಗೆ ಯಾವುದೇ ಇಲ್ಲದ ಕಾರಣ ವಕೀಲರು ಇದನ್ನು ಸಾಬೀತುಪಡಿಸಲು ವಿಫಲರಾಗಿದ್ದರು. ಆದ್ದರಿಂದ ಬಾಲಕಿಯ ಮೇಲೆ ಪ್ರೀತಿ ತೋರಿಸುವುದಕ್ಕಾಗಿ ಅಕೆಯ ಕೈಯನ್ನು ಹಿಡಿದ ಮಾತ್ರಕ್ಕೆ ಇದು ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಎಂದು ಕೋರ್ಟ್ ಹೇಳಿ ಯುವಕನ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದೆ.