ಪ್ರೀತಿಗೆ ಮನೆಯವರ ವಿರೋಧ.. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ....
Friday, August 6, 2021
ಹುಬ್ಬಳ್ಳಿ: ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಆಕೆಯ ಪ್ರಾಣ ಉಳಿಸಿ ಉಪನಗರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಯುವತಿಯೊಬ್ಬಳು ಒಬ್ಬಾತನನ್ನುಪ್ರೀತಿಸಿ ಮದುವೆಗೆ ಮುಂದಾಗಿದ್ದಳು. ಆದರೆ, ಮನೆಯವರು ಪ್ರೀತಿಗೆ ಒಪ್ಪದ ಕಾರಣ ಮನನೊಂದು ನಿದ್ದೆ ಮಾತ್ರೆ ಸೇವಿಸಿದ್ದಾಳೆ ಎಂದು ತಿಳಿದು ಬಂದಿದೆ.ಮಾತ್ರೆ ತೆಗೆದುಕೊಂಡ ನಂತರ, ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.