ಮಹಿಳೆಯರ ಜೊತೆ ಅಸಹಜ ಲೈಂಗಿಕ ಕ್ರೀಯೆಯೂ ಅತ್ಯಾಚಾರಕ್ಕೆ ಸಮ- ಕೇರಳ ಹೈಕೋರ್ಟ್ ನೀಡಿದೆ ಮಹತ್ತರ ತೀರ್ಪು!
Friday, August 6, 2021
ಕೊಚ್ಚಿ(ಕೇರಳ): ಮಹಿಳೆಯರ ತೊಡೆಗಳ ನಡುವಣ ಅಸಹಜ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರಕ್ಕೆ ಸಮ ಎಂದು ಕೇರಳ ಹೈಕೋರ್ಟ್ ಹೇಳಿದೆ.ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಅವರಿದ್ದ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತೆ ಮೇಲೆ ಆಕೆಯ ನೆರೆ ಮನೆಯ ವ್ಯಕ್ತಿ ದುರುದ್ದೇಶಪೂರಿತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣಾ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಎತ್ತಿಹಿಡಿದಿದೆ.
ತೊಡೆಗಳನ್ನು ಒಟ್ಟಿಗೆ ಜೋಡಿಸಿ ಅದರ ಸಂಧಿಯಲ್ಲಿ ನಡೆಸುವ ಅಸಹಜ ಲೈಂಗಿಕ ಕ್ರಿಯೆ ಸೆಕ್ಷನ್ 375 ರ ಅಡಿ ಖಂಡಿತವಾಗಿಯೂ ಅತ್ಯಾಚಾರ ಆಗುತ್ತದೆ ಎಂದು ಪೀಠವು ತೀರ್ಪು ನೀಡಿದೆ. ಆದರೆ, ಪ್ರತಿವಾದಿಗಳು ಸಂತ್ರಸ್ತೆಯು ಬಾಲಕಿ ಎಂಬುದಕ್ಕೆ ಪೂರಕ ದಾಖಲೆ ಸಲ್ಲಿಸಲು ವಿಫಲರಾಗಿದ್ದಾರೆ. ಹೀಗಾಗಿ ಈ ಪ್ರಕರಣ ಪೋಕ್ಸೊ ಕಾಯ್ದೆಯಡಿ ಬರುವುದಿಲ್ಲ ಎಂದು ಪೀಠ ತಿಳಿಸಿದೆ.ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಸೆಕ್ಷನ್ 375ರ ಅತ್ಯಾಚಾರದ ವ್ಯಾಖ್ಯಾನವು ಯೋನಿ, ಮೂತ್ರನಾಳ, ಗುದದ್ವಾರ ಅಥವಾ ದೇಹದ ಯಾವುದೇ ಭಾಗದ ಮೇಲೆ ಅಸಹಜ ಲೈಂಗಿಕ ದೌರ್ಜನ್ಯವನ್ನು ಹೇಳುತ್ತೆ ಎಂದು ನ್ಯಾಯಾಲಯ ವಿವರಿಸಿದೆ.