-->

ಅಪರಿಚಿತ ಬಾಲಕಿಯನ್ನೇ ತಬ್ಬಿ ಮುತ್ತಿಟ್ಟ ಯುವಕ: ಅನುಚಿತ ವರ್ತನೆಗೆ ಬೆಚ್ಚಿ ಚೀರಿದ ಬಾಲಕಿ

ಅಪರಿಚಿತ ಬಾಲಕಿಯನ್ನೇ ತಬ್ಬಿ ಮುತ್ತಿಟ್ಟ ಯುವಕ: ಅನುಚಿತ ವರ್ತನೆಗೆ ಬೆಚ್ಚಿ ಚೀರಿದ ಬಾಲಕಿ

ಬೆಂಗಳೂರು: ರಾಜ್ಯದ ಮೈಸೂರು, ತುಮಕೂರು, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಒಂದರ ಹಿಂದೊಂದು ಅತ್ಯಾಚಾರ ಪ್ರಕರಣ ನಡೆಯುತ್ತಲೇ ಇದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಯುವಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಅಪರಿಚಿತ ಬಾಲಕಿಯನ್ನು ತಬ್ಬಿ ಮುತ್ತಿಟ್ಟ ಘಟನೆ ನಡೆದಿದೆ. ಈತನ ಅನುಚಿತ ವರ್ತನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ವೈರಲ್​ ಆಗುತ್ತಿದೆ. 

ಬೆಂಗಳೂರಿನ‌ ಪೀಣ್ಯದಲ್ಲಿ‌ ಘಟನೆ ನಡೆದಿದೆ. ಶನಿವಾರ ಸಂಜೆ ನಾಲ್ವರು ಯುವಕರ ತಂಡವೊಂದು ಬರುತ್ತಿತ್ತು.‌ 16 ವರ್ಷದ ಬಾಲಕಿಯೂ ಅದೇ ದಾರಿಯಾಗಿ ಬರುತ್ತಿದ್ದಳು. ಈ ಯುವಕ ಬಾಲಕಿಯನ್ನು ಗಮನಿಸಿದ್ದಾನೆ. ಬಳಿಕ ಹಿಂದೆಯೇ ಓಡಿ ಹೋಗಿ ಬಲವಂತವಾಗಿ ಆಕೆಯನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾನೆ. ಆತಂಕಗೊಂಡ ಬಾಲಕಿ ಜೋರಾಗಿ ಚೀರಿದ್ದಾಳೆ. ಇದರಿಂದ ಆರೋಪಿ ಆಕೆಯನ್ನು ಬೆದರಿಸಿ ಪರಾರಿಯಾಗಿದ್ದಾನೆ. 

ಬಾಲಕಿ ಜತೆ ಯುವಕ ಅಸಭ್ಯವಾಗಿ ವರ್ತಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಿಕೊಂಡು ಕೂಡಲೇ ಆರೋಪಿಯನ್ನು ಬಂಧಿಸುವಂತೆ ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ಮೀನಾ ಪೀಣ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99