ನಾನು ಕೆಟ್ಟ ಮಗಳು, ಮಿಸ್ ಯೂ ಡ್ಯಾಡಿ, ಮಮ್ಮಿ.... ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಸಾವು...!!
Tuesday, August 24, 2021
ಹೈದರಾಬಾದ್:ಸೊಸೈಡ್ ನೋಟ್ ಬರೆದಿಟ್ಟು ಸೆಂಟ್ರಲ್ ಯೂನಿವರ್ಸಿಟಿಯ ದ್ವಿತೀಯ ವರ್ಷದ M Tech ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಲಚ್ಚಯ್ಯ-ರಜಿತಾ ದಂಪತಿಯ ಪುತ್ರಿ 27 ವರ್ಷದ ಮೌನಿಕಾ ನ್ಯಾನೋ ತಂತ್ರಜ್ಞಾನ ಓದುತ್ತಿದ್ದಳು. ಹಾಸ್ಟೆಲ್ ರೂಂನಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ರೂಂನಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.
ಆಕೆ ಸೋಮವಾರ ಬೆಳಗ್ಗೆ ರೂಂನಿಂದ ಹೊರ ಬರದ ಕಾರಣ ಅಲ್ಲಿನ ಬೇರೆ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಸ್ಥಳದಲ್ಲಿ ಸೊಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾನು ಕೆಟ್ಟ ಮಗಳು, ಮಿಸ್ ಯೂ ಡ್ಯಾಡಿ, ಮಮ್ಮಿ ಎಂದು ಬರೆದುಕೊಂಡಿದ್ದಾಳೆ.
ಇದಕ್ಕೆ ಸಂಬಂಧಿಸಿದಂತೆ ಗಚ್ಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.