'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ಅವಘಡ: ಹೈಟೆನ್ಷನ್ ವೈಯರ್ ತಗುಲಿ ಫೈಟರ್ ಬಲಿ..
Tuesday, August 10, 2021
ರಚಿತಾ ರಾಮ್ ಹಾಗೂ ಅಜಯ್ ರಾವ್ ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ವಿವೇಕ್ ಎಂಬ ಫೈಟರ್ ಮೃತಪಟ್ಟಿದ್ದಾರೆ.
ಬಿಡದಿ ಬಳಿಯ ಜೋಗನಪಾಳ್ಯ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ 'ಲವ್ ಯೂ ರಚ್ಚು' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಫೈಟರ್ ಮೃತಪಟ್ಟಿದ್ದಾರೆ. ಇನ್ನೂ ಮತ್ತೊಬ್ಬ ಸಾಹಸ ಕಲಾವಿದ ರಂಜಿತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ಲವ್ ಯೂ ರಚ್ಚು' ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್ ಮತ್ತು ಕ್ರೇನ್ ಆಪರೇಟರ್ ಮಹಾದೇವ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.