MANGALORE: ಐಸಿಸ್ ಉಗ್ರನ ಜೊತೆಗೆ ಸಂಪರ್ಕ ಹೊಂದಿದ್ದ ಮಂಗಳೂರಿನ ಮಾಜಿ ಶಾಸಕರ ಮೊಮ್ಮಗ ಅರೆಸ್ಟ್
ಮಂಗಳೂರು: ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಮೊಮ್ಮಗ ಐಸಿಸ್ ಉಗ್ರನ ಜೊತೆಗೆ ಸಂಪರ್ಕವಿರಿಸಿ ಐಸಿಸ್ ಸೇರಲು ಜನರನ್ನು
ಪ್ರೇರೆಪಿಸಿದ ಮತ್ತು ಹಣ ಸಂಗ್ರಹಣೆಯಲ್ಲಿ ತೊಡಗಿದ್ದ ಆರೋಪದಲ್ಲಿ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.
ಉಳ್ಳಾಲದ ಮಾಜಿ ಶಾಸಕ
ಬಿ ಎಂ ಇದಿನಬ್ಬ ಅವರ ಮೊಮ್ಮಗ ಅಮರ್ ಅಬ್ದುಲ್ ರಹಮಾನ್
ಬಂಧಿತ ಆರೋಪಿ. ಅಮರ್ ಅಬ್ದುಲ್ ರಹಮಾನ್ ಸೇರಿದಂತೆ ನಾಲ್ಕು ಮಂದಿಯನ್ನು ದೇಶದ ವಿವಿಧೆಡೆ ಬಂಧಿಸಲಾಗಿದೆ.
ಅಮರ್ ಅಬ್ದುಲ್ ರಹಮಾನ್ ಐಸಿಸ್ ಉಗ್ರ ಮೊಹಮ್ಮದ್ ಅಮೀನ್ ಎಂಬಾತನ ಜೊತೆಗೆ
ಸಂಪರ್ಕದಲ್ಲಿದ್ದ. ಮೊಹಮ್ಮದ್ ಅಮೀನ್ ಕೇರಳದವನಾಗಿದ್ದು ಈತ ಸಾಮಾಜಿಕ ಜಾಲತಾಣದಲ್ಲಿ ಐಸಿಸ್ ಬಗ್ಗೆ
ಪ್ರಚಾರ ಮಾಡಿ, ಐಸಿಸ್ ಗೆ ಹಣ ಸಂಗ್ರಹದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಎನ್ ಐ ಎ ಸುಮೋಟೋ ಕೇಸ್
ದಾಖಲಿಸಿತ್ತು. ಇತ್ತೀಚೆಗೆ ಈತನನ್ನು ಬಂಧಿಸಿದ ವೇಳೆ ಈತನ ಜೊತೆಗಿದ್ದವರ ಸಂಪರ್ಕದ ಬಾಯಿಬಿಟ್ಟಿದ್ದಾನೆ.
i) Obaid Hamid,
r/o Bemina , Srinagar ii) Muzammil Hassan Bhat , r/o
Bandipora , Kashmir, iii) Ammar Abdul Rahman , r/o Ullal Mangalore and iv)
Shankar Venkatesh Perumal @ Ali Muaviya ,r/o Bangalore. ಎಂಬವರು ಈತನ ಜೊತೆಗೆ ಂಪರ್ಕದಲ್ಲಿದ್ದು ಇವರ ಮನೆಗೆ ಇಂದು ಎನ್ ಐ
ಎ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಇವರು ಕೂ ಐಸಿಸ್ ಗೆ ಜನರನ್ನು ಸೇರಿಸಲು ಮತ್ತು ಹಣ
ಸಂಗ್ರಹಣೆ ಕಾರ್ಯದಲ್ಲಿ ಸಹಕರಿಸುತ್ತಿದ್ದರು ಎಂದು ಹೇಳಲಾಗಿದೆ