![ವಾಟ್ಸಾಪ್ನಲ್ಲಿ ಬಂತು ಹೊಸ ಫೀಚರ್- ಇನ್ನು ಕರೆ ಮಾಡುವವರಿಗೆ ತುಂಬಾ ಸುಲಭ.. ವಾಟ್ಸಾಪ್ನಲ್ಲಿ ಬಂತು ಹೊಸ ಫೀಚರ್- ಇನ್ನು ಕರೆ ಮಾಡುವವರಿಗೆ ತುಂಬಾ ಸುಲಭ..](https://blogger.googleusercontent.com/img/b/R29vZ2xl/AVvXsEhqqO6IMDjCPPo5f3bHJYLUAMv60mzpbowDdhYEDCh97z3F2KGjQ7RRjFsanXyHfUEjfpWrlh-m6w6u6EsDxTvGvDKd06YRgIdVR6sL_uzp886HN_v1mKouD13ppRI5hQEi6EZXV5vVqsr_/s1600/1627201488138126-0.png)
ವಾಟ್ಸಾಪ್ನಲ್ಲಿ ಬಂತು ಹೊಸ ಫೀಚರ್- ಇನ್ನು ಕರೆ ಮಾಡುವವರಿಗೆ ತುಂಬಾ ಸುಲಭ..
Sunday, July 25, 2021
ಬೆಂಗಳೂರು: ಐಫೋನ್ ಬಳಕೆದಾರರಿಗೆ ವಾಟ್ಸ್‌ಆ್ಯಪ್, ನೂತನ ಅಪ್‌ಡೇಟ್ ಬಿಡುಗಡೆ ಮಾಡಿದೆ. ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡುವವರಿಗೆ ಹೊಸ ಫೀಚರ್‌ನಿಂದ ಹೆಚ್ಚಿನ ಅನುಕೂಲವಾಗಲಿದೆ.
ಐಫೋನ್ ಬಳಕೆದಾರರಿಗೆ ವಾಟ್ಸ್‌ಆ್ಯಪ್ ಅಪ್ಲಿಕೇಶನ್‌ನಲ್ಲಿ ಹೊಸ ಅಪ್‌ಡೇಟ್ ಜತೆಗೆ ನೂತನ ಸ್ಕ್ರೀನ್ ಕೂಡ ಕಾಣಿಸಿಕೊಳ್ಳುತ್ತಿದೆ. ವಾಟ್ಸ್‌ಆ್ಯಪ್ ಕರೆಯ ಹೋಮ್ ಸ್ಕ್ರೀನ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಇಂಟರ್‌ಫೇಸ್, ಆ್ಯಪಲ್ ಫೇಸ್‌ಟೈಮ್ ರೂಪದಲ್ಲಿದೆ. ಬಳಕೆದಾರರು ಗ್ರೂಪ್ ಕರೆ ಮಾಡುವಾಗ, ವೈಯಕ್ತಿಕ ಕರೆ ಮಾಡುವ ಸಂದರ್ಭ, ಅವರು ಸ್ವೀಕರಿಸದೇ ಇದ್ದರೂ, ಮತ್ತೆ ಕರೆ ಚಾಲೂ ಇದ್ದರೆ ಅಲ್ಲಿ ಸೇರಿಕೊಳ್ಳಬಹುದು. ಅವರಿಗೆ ಮತ್ತೆ ಪ್ರತ್ಯೇಕವಾಗಿ ಕರೆ ಮಾಡಿ ಸೇರಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲಿಯೇ ಇರುವ ಆಯ್ಕೆಯನ್ನು ಬಳಸಿಕೊಂಡು ಕರೆಯಲ್ಲಿ ಸೇರಿಕೊಳ್ಳುವ ಆಯ್ಕೆಯಿದೆ