
ಗಂಡನ ಬೆತ್ತಲೆ ವಿಡಿಯೋ ಪ್ರಕರಣ ಶಿಲ್ಪಾಶೆಟ್ಟಿಗೆ ಕಂಟಕವಾಯಿತ...?
Saturday, July 24, 2021
ಮುಂಬೈ: ಶಿಲ್ಪಾ ಶೆಟ್ಟಿ ಅವರ ರೀಎಂಟ್ರಿ ಚಿತ್ರವಾದ ‘ಹಂಗಾಮಾ 2’ ಬಗ್ಗೆ ಪ್ರೇಕ್ಷಕರಲ್ಲಿ ಒಂದಿಷ್ಟು ನಿರೀಕ್ಷೆಗಳು ಇದೀಗ ಸುಳ್ಳಾಗಿದೆ.
‘ಹಂಗಾಮಾ 2’ ಚಿತ್ರವು ಶುಕ್ರವಾರ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೋಡಿರುವ ಪ್ರೇಕ್ಷಕರು ‘ಹಂಗಾಮಾ’ದಷ್ಟು ಈ ಚಿತ್ರ ಚೆನ್ನಾಗಿ ಮೂಡಿಬಂದಿಲ್ಲ ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಐಎಂಡಿಬಿಯಲ್ಲಿ ಚಿತ್ರಕ್ಕೆ 10ಕ್ಕೆ 3.7 ರೇಟಿಂಗ್ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ರೇಟಿಂಗ್ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.
‘ಹಂಗಾಮಾ 2’ ಬಿಡುಗಡೆಯಾಗುವುದಕ್ಕೆ ಮೂರು ದಿನಗಳ ಹಿಂದಷ್ಟೇ ಶಿಲ್ಪಾ ಗಂಡ ರಾಜ್ ಕುಂದ್ರಾ ನೀಲಿ ಚಿತ್ರಗಳ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಈ ವಿಷಯವಾಗಿ ಮಾತನಾಡಿದ್ದ ಶಿಲ್ಪಾ, ‘ಚಿತ್ರಕ್ಕೂ ರಾಜ್ ಕುಂದ್ರಾಗೂ ಸಂಬಂಧವಿಲ್ಲದಿ. ಅವರಿಂದಾಗಿ ಚಿತ್ರಕ್ಕೆ ತೊಂದರೆಯಾಗಬಾರದು. ಚಿತ್ರ ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದರು.