ಕೊರೊನಾ ಲಸಿಕೆ ಪಡೆದ ಬಳಿಕ ಸೆಕ್ಸ್ ಮಾಡ್ಬೇಡಿ...- ಹೀಗಂತ ಈ ದೇಶದ ಜನತೆಗೆ ಸಲಹೆ ನೀಡಿದ್ದಾರೆ ವೈದ್ಯರು...
Monday, July 12, 2021
ಮಾಸ್ಕೋ: ಕೋವಿಡ್ ವಿರುದ್ಧ ಲಸಿಕೆ ಪಡೆದ ನಂತರ ಕನಿಷ್ಠ ಮೂರು ದಿನಗಳವರೆಗೆ ಲೈಂಗಿಕ ಕ್ರಿಯೆಯಿಂದ ದೂರವಿರಲು ರಷ್ಯಾ ಜನರಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದಾರೆ.
ರಷ್ಯಾದ ಸೆರಾಟೋವ್ ಪ್ರದೇಶದ ಉಪ ಆರೋಗ್ಯ ಸಚಿವ ಡಾ.ಡೆನಿಸ್ ಗ್ರೇಫರ್, ಲಸಿಕೆ ಪಡೆದ ನಂತರ ದೈಹಿಕ ಒತ್ತಡದಿಂದ ದೂರವಿರಬೇಕು. ಹೀಗಾಗಿ ಲೈಂಗಿಕತೆ ಸೇರಿದಂತೆ ದೈಹಿಕ ಒತ್ತಡಕ್ಕೆ ಸಂಬಂಧಿಸಿದ ಕ್ರಿಯೆಗಳಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.
ಲೈಂಗಿಕತೆಯು ತುಂಬಾ ಶಕ್ತಿಯುತವಾದ ಚಟುವಟಿಕೆಯಾಗಿದೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ ಎಂಬುದನ್ನು ನಾನು ನಂಬುತ್ತೇನೆ. ಆದ್ದರಿಂದ ಲಸಿಕೆ ಪಡೆದ ಜನರು ಲೈಂಗಿಕ ಕ್ರಿಯೆ ಸೇರಿದಂತೆ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಸುತ್ತೇನೆ ಎಂದು ಡಾ.ಗ್ರೇಫರ್ ತಿಳಿಸಿದ್ದಾರೆ.