ಜು. 13 ಅಥವಾ 14 ಕ್ಕೆ ಭೂಮಿಗಪ್ಪಳಿಸಲು ಸಜ್ಜಾಗಿದೆ ಸೌರ ಚಂಡಮಾರುತ!
Monday, July 12, 2021
ವಾಷಿಂಗ್ಟನ್: ಭಾರೀ ಪ್ರಮಾಣದ ಸೂರ್ಯನ ಶಾಖದ ಅಲೆಗಳು ಸೌರ ಚಂಡಮಾರುತದ ರೂಪದಲ್ಲಿ ಮಂಗಳವಾರ ಅಥವಾ ಬುಧವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಯಸ್ಕಾಂತೀಯ ಗುಣದ ಚಂಡಮಾರುತ ಎಂದು ಕರೆಯಲ್ಪಡುವ ಇದು ಅತೀ ವೇಗದ ಸೌರ ಮಾರುತವಾಗಿದ್ದು, ಭೂಮಿಯ ಮ್ಯಾಗ್ನೆಟಿಕ್ ವಲಯದ ಮೇಲೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಸೂರ್ಯನ ವಾತಾವರಣದಲ್ಲಿ ರಂಧ್ರವೊಂದು ತೆರೆದಿದ್ದು, ಆ ಮೂಲಕ ಈ ಬಿಸಿ ತಾಪದ ಚಂಡಮಾರುತ ಹೊರಬರುತ್ತಿದ್ದು, ಇದು ಭೂಮಿಯತ್ತ ಬೀಸುತ್ತಿರುವುದಾಗಿ ವಿಜ್ಞಾನಿಗಳು ವಿವರಿಸಿದ್ದಾರೆ. ಈ ಸೌರ ಚಂಡಮಾರುತ ಭೂಮಿಯ ಆಯಸ್ಕಾಂತೀಯ ಕ್ಷೇತ್ರದ ಮೇಲೆ ಅಪ್ಪಳಿಸಿದಲ್ಲಿ ಜಿಪಿಎಸ್, ಮೊಬೈಲ್ ಸಿಗ್ನಲ್ಸ್, ಸೆಟಲೈಟ್ ಟಿವಿ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಸೌರ ಚಂಡಮಾರುತದ ವೇಗ ಗಂಟೆಗೆ 1.6 ಮಿಲಿಯನ್ ಕಿಲೋ ಮೀಟರ್ ವೇಗದಲ್ಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಇನ್ನಷ್ಟು ಉಷ್ಣಗೊಳಿಸಲಿದ್ದು, ಇದರಿಂದಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿವರಿಸಿದೆ.