ಕಣ್ಣಿಗೆ ಟ್ಯಾಟೂ, ಹಲ್ಲಿಗೆ ಮೆಟಲ್, ಮೈ ತುಂಬಾ ಹಚ್ಚೆ ಹಾಕಿದ ಈತನ ವಿಚಿತ್ರ ಜೀವನ....
Sunday, July 18, 2021
ನವದೆಹಲಿ: ಕರಣ್ ಸಿಧು ಎಂಬಾತ ಕಣ್ಣಿನ ಬಿಳಿಗುಡ್ಡೆಯಿಂದ ಹಿಡಿದು ದೇಹದ ಪ್ರತಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಈತ ನವದೆಹಲಿ ನಿವಾಸಿ ಕರಣ್ ತನ್ನ ಹೆಸರನ್ನೇ ಟ್ಯಾಟೂಗ್ರಾಫರ್ ಕರಣ್ ಎಂದು ಬದಲಾಯಿಸಿಕೊಂಡಿದ್ದಾನೆ
ತನ್ನ 16ನೇ ವಯಸ್ಸಿನಿಂದಲೇ ಟ್ಯಾಟೂ ಕಡೆ ಗಮನ ಹರಿಸಿದ ಕರಣ್ ಈಗ ತನ್ನದೇ ಆದ ಟ್ಯಾಟೂ ಶಾಪ್ ಹೊಂದಿದ್ದಾನೆ. ತಲೆಯಿಂದ ಪಾದದವರೆಗೆ ಎಲ್ಲ ಕಡೆಯಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಅಷ್ಟೇ ಅಲ್ಲದೆ ತನ್ನ ಕಣ್ಣಿನ ಬಿಳಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡು ಕಪ್ಪು ಮಾಡಿಸಿಕೊಂಡು ಬಂದಿದ್ದಾನೆ. ಕಿವಿಯ ರೂಪವನ್ನೂ ಆಪರೇಷನ್ ಮಾಡಿ ಬದಲಾಯಿಸಲಾಗಿದೆ. ಹಲ್ಲೂ ವಿಶೇಷವಾಗಿರಲಿ ಎಂದು ಮಾಮೂಲಿ ಹಲ್ಲನ್ನು ಕೀಳಿಸಿ ಮೆಟಲ್ ಹಲ್ಲನ್ನು ಹಾಕಿಸಿಕೊಂಡಿದ್ದಾನೆ. ನಾಲಿಗೆ ಸಾಮಾನ್ಯವಾಗಿರಬಾರದೆಂದು ಅದನ್ನು ಸೀಳಿಸಿ ಹಾವಿನ ನಾಲಿಗೆಯಂತೆ ಸೀಳು ನಾಲಿಗೆ ಮಾಡಿಕೊಂಡಿದ್ದಾನೆ.
ಇದರ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡ ಕರಣ್ ಭಾರತದಲ್ಲಿ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ನಾನು. ಅದೇ ಕಾರಣಕ್ಕೆ ನನ್ನ 19ನೇ ವಯಸ್ಸಿಗೇ ನನಗೆ ಗಿನ್ನೆಸ್ ರೆಕಾರ್ಡ್ ಬಂದಿದೆ. ಎಲ್ಲ ಹಂತದಲ್ಲೂ ಸಾಕಷ್ಟು ನೋವಾಗುತ್ತಿತ್ತು. ಆದರೆ ಪ್ಯಾಶನ್ಗಾಗಿ ನೋವನ್ನು ತಡೆದುಕೊಳ್ಳಲು ನಾನು ಸಿದ್ಧನಿದ್ದೆ. ಈಗ ಬಾಡಿ ಬಿಲ್ಡಿಂಗ್ ಕಡೆ ಗಮನ ಹರಿಸುತ್ತಿದ್ದೇನೆ.ನನ್ನ ಪೋಷಕರು ನನಗೆ ಸಂಪೂರ್ಣ ಸಪೋರ್ಟ್ ಮಾಡುತ್ತಿದ್ದಾರೆೆ ಎಂದಿದ್ದಾನೆ.