
Tokyo Olymphic 2020- ಕಾಂಡೋಮ್ ಬಳಸಿ ಪದಕ ಗೆದ್ದೆ ಎಂದ ಸ್ಪರ್ಧೆ..!!
ಟೋಕಿಯೋ: ಆಸ್ಟ್ರೇಲಿಯಾದ ಕ್ಯಾನೋಯಿಸ್ಟ್ ಜೆಸ್ಸಿಕಾ ಫಾಕ್ಸ್ ಅವರು ಟೋಕಿಯೋ ಒಲಿಂಪಿಕ್ಸ್ನ ಕಯಾಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಆಕೆಯ ಗೆಲುವಿಗೆ ಕಾಂಡೋಮ್ ಮಹತ್ವದ ಪಾತ್ರ ವಹಿಸಿತು ಎಂದು ಜಸ್ಸಿಕಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಒಲಿಂಪಿಕ್ಸ್ ಗ್ರಾಮದಲ್ಲಿ ಸ್ಪರ್ಧಿಗಳಿಗೆ ನೀಡುವ ಕಾಂಡೋಮ್ ಜಸ್ಸಿಕಾಳಿಗೆ ಸರಿಯಾದ ಸಮಯದಲ್ಲಿ ಉಪಯೋಗಕ್ಕೆ ಬಂದಿದೆ. ಸ್ಪರ್ಧೆಯಲ್ಲಿ ಆಕೆಯ ಮುರಿದು ಹೋದ ಕಯಾಕ್ ಅನ್ನು ಕಾಂಡೋಮ್ನಿಂದಲೇ ಜಸ್ಸಿಕಾ ಸರಿಮಾಡಿಕೊಂಡು ಸ್ಪರ್ಧೆ ಮುಂದುವರಿಸಿದರು. ಅವಳ ಈ ತಂತ್ರವೂ ಎಲ್ಲರ ಹುಬ್ಬೇರಿಸಿದೆ.
ಕಯಾಕ್ ರಿಪೇರಿಗಾಗಿ ಕಾಂಡೋಮ್ಗಳನ್ನು ಬಳಸಬಹುದೆಂದು ನಿಮಗೆ ತಿಳಿದಿಲ್ಲ, ಬೇಕಿದ್ದರೆ ಪಂದ್ಯ ಕಟ್ಟಿ ಎಂದಿದ್ದಾರೆ. ಕಾಂಡೋಮ್ ಹೇಗೆ ಬಳಸಿದ ಎಂಬ ವಿಡಿಯೋ ವಿವರಣೆಯನ್ನು ಸಹ ಪೋಸ್ಟ್ ಮಾಡಿದ್ದಾರೆ.