ಗಂಡನ ಬೆತ್ತಲೆ ವಿಡಿಯೋ ನಿರ್ಮಾಣದ ಕಥೆ- ಪೊಲೀಸರ ಎದುರು ಕಣ್ಣೀರು ಹಾಕಿದ ಕುಡ್ಲದ ಹುಡುಗಿ...
Monday, July 26, 2021
ಮುಂಬೈ: ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ವಿದೇಶಿ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ಇತ್ತ
ಮುಂಬೈ ಅಪರಾಧ ವಿಭಾಗದ ಪೊಲೀಸರು ಹೆಚ್ಚಿನ ತನಿಖೆಗಾಗಿ ಶಿಲ್ಪಾ ಮತ್ತು ರಾಜ್ ಕುಂದ್ರಾರ ಕಿನಾರಾ ಬಂಗಲೆ ಮೇಲೆ ರೇಡ್ ಮಾಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಶಿಲ್ಪಾ ಹೇಳಿಕೆಯನ್ನು ದಾಖಲಿಸಿದ್ದಾರೆ. ಶಿಲ್ಪಾ ಪೊಲೀಸರ ಮುಂದೆ ಕಣ್ಣೀರಾಕಿದ್ದಾರೆಂಬ ಮಾಹಿತಿ ಪೊಲೀಸ್ ಮೂಲಗಳಿಂದ ಹೊರಬಿದ್ದಿದೆ. ರಾಜ್ ಕುಂದ್ರಾ ಅವರನ್ನು ಪೊಲೀಸರು ಅವರ ಮನೆಗೆ ಕರೆತಂದಾಗ ಶಿಲ್ಪಾ ಅಸಮಾಧಾನಗೊಂಡಿದ್ದರಂತೆ. ಅಲ್ಲದೆ, ಇಬ್ಬರು ನಡುವೆ ವಾಗ್ವಾದವೂ ನಡೆದಿದೆ ಎಂದು ಹೇಳಲಾಗಿದೆ. ಪರಸ್ಪರ ಎದುರು ನಿಲ್ಲಿಸಿ ವಿಚಾರಣೆ ನಡೆಸಿದಾಗ ಶಿಲ್ಪಾ ಅವರು ಕಣ್ಣೀರಾಕುತ್ತಿದ್ದರಂತೆ. ಶಿಲ್ಪಾ ಶೆಟ್ಟಿ, ಕುಂದ್ರಾ ಕಂಪನಿಯಲ್ಲಿ ನನ್ನ ಪಾತ್ರ ಇಲ್ಲ ಎಂದು ನಿರಾಕರಿಸಿದ್ದಾರೆ.
ಆ ಬಂಧನವಾಗಿರುವ ರಾಜ್ ಕುಂದ್ರಾರನ್ನು ಜುಲೈ 23ರವರೆಗೆ ಮುಂಬೈ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜುಲೈ 27ರವರೆಗೆ ಬಂಧನವನ್ನು ಕೋರ್ಟ್ ವಿಸ್ತರಿಸಿದೆ.