-->

ಸ್ಯಾಂಡಲ್ವುಡ್ ಪ್ರವೇಶಿಸುತ್ತಿರುವ ನಟಿ ಪ್ರಿಯಾಂಕ 'ಬ್ಯಾಡ್ ಮ್ಯಾನರ್ಸ್'..!

ಸ್ಯಾಂಡಲ್ವುಡ್ ಪ್ರವೇಶಿಸುತ್ತಿರುವ ನಟಿ ಪ್ರಿಯಾಂಕ 'ಬ್ಯಾಡ್ ಮ್ಯಾನರ್ಸ್'..!

 
ಬೆಂಗಳೂರು: ನಿರ್ದೇಶಕ ಸೂರಿ ಮತ್ತು ಅಭಿಷೇಕ್ ಅಂಬರೀಷ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ  ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೆಲಸಗಳು ಮತ್ತೆ ಶುರುವಾಗಿವೆ. 

ಚಿತ್ರ ತಂಡ ಇದೀಗ ಚಿತ್ರೀಕರಣದತ್ತ ಮುಖ ಮಾಡಿದೆ. ಈ ನಡುವೆ ಅಭಿಷೇಕ್​ಗೆ ಜೋಡಿಯಾಗುವ ಮೂಲಕ ಮೊದಲ ಬಾರಿ ನಟಿ ಪ್ರಿಯಾಂಕಾ ಕುಮಾರ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದು  ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ. 

ಈ ಬಗ್ಗೆ ಸಂಭ್ರಮದಲ್ಲಿಯೇ ಮಾತನಾಡುವ ಪ್ರಿಯಾಂಕ, ‘ಸೂರಿ ಅವರೊಂದಿಗೆ ಸಿನಿಮಾ ಮಾಡಬೇಕೆಂಬುದು ಎಲ್ಲರ ಕನಸು. ಆ ನನ್ನ ಕನಸೀಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮೂಲಕ ಈಡೇರುತ್ತಿದೆ. ಈ ಮೊದಲು ಒಂದು ದಿನದ ಶೂಟಿಂಗ್​ನಲ್ಲಿ ಮಾತ್ರ ನಾನು ಭಾಗವಹಿಸಿದ್ದೇನೆ. ಆಗಸ್ಟ್​ನಿಂದ ಚಿತ್ರೀಕರಣ ಶುರುವಾಗಲಿದೆ. ತಂಡ ಸೇರಿಕೊಳ್ಳಲು ಕಾಯುತ್ತಿರುವೆ’ ಎಂದಿದ್ದಾರೆ ಪ್ರಿಯಾಂಕಾ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99