'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ನಿಂದಾಗಿ ಸಾಕಷ್ಟು ಪ್ರಪೋಸಲ್ ಬರ್ತೀವೆ - ನಟಿ ಆಶ್ಲೇಷಾ ಠಾಕೂರ್
Sunday, July 11, 2021
ಮುಂಬೈ: ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಹದಿಹರೆಯದ ತರುಣಿ ಧೃತಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಆಶ್ಲೇಷಾ ಠಾಕೂರ್ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ಆಶ್ಲೇಷಾ ಠಾಕೂರ್ ಸೀರಿಸ್ ನಲ್ಲಿ ಬರುವ ಕಿಡ್ನ್ಯಾಪ್ ಸೀನ್ ಆಕೆಗೆ ಮಾನಸಿಕವಾಗಿ ಸಾಕಷ್ಟು ನೋವುಂಟು ಮಾಡಿತ್ತಂತೆ. ಈ ಸೀನ್ ಅನ್ನು ಬೇರೆ ರೀತಿಯಲ್ಲಿ ಬದಲಾಯಿಸಿ ಎಂದು ನಿರ್ದೇಶಕರಿಗೆ ಮನವಿ ಮಾಡಿದ್ದಳಂತೆ. ಆದರೆ ಅದಕ್ಕೆ ಅವರು ಒಪ್ಪದಿದ್ದಾಗ, ಧೈರ್ಯ ತೆಗೆದುಕೊಂಡು ನಟಿಸಿದೆ ಎನ್ನುತ್ತಾರೆ ನಟಿ ಆಶ್ಲೇಷಾ ಠಾಕೂರ್.
ಆ ರೀತಿಯ ಪಾತ್ರದಲ್ಲಿ ನಟಿಸಿದ್ದರಿಂದಾಗಿ ಇಂದು ನನ್ನನ್ನು ಜನರು ಒಬ್ಬ ನಟಿಯಾಗಿ ಗುರುತಿಸುತ್ತಿದ್ದಾರೆ. ಸೀಸನ್ ಹಿಟ್ ಆದ ನಂತರ ಸಾಕಷ್ಟು ಜನರು ನನಗೆ ನೇರವಾಗಿ ಮದುವೆ ಪ್ರಪೋಸ್ ತಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಾಕಷ್ಟು ಮೆಸೇಜ್ಗಳು ಪ್ರೀತಿ ನಿವೇದನೆಯೇ ಆಗಿದೆ ಎಂದು ಆಶ್ಲೇಷಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.