-->

ಫೋನ್ನಲ್ಲಿ ಅಶ್ಲೀಲವಾಗಿ ಮಾತನಾಡಿದ SDA ನೌಕರನಿಗೆ ಮಹಿಳೆಯಿಂದ ಬಿತ್ತು ಗೂಸಾ...

ಫೋನ್ನಲ್ಲಿ ಅಶ್ಲೀಲವಾಗಿ ಮಾತನಾಡಿದ SDA ನೌಕರನಿಗೆ ಮಹಿಳೆಯಿಂದ ಬಿತ್ತು ಗೂಸಾ...

ಮೈಸೂರು: ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾಕ್ಕಾಗಿ ಪಾಲಿಕೆಯ ವಲಯ ನೌಕರನ ಕಚೇರಿಗೆ ಬಂದು ಮಹಿಳೆ ಆತನಿಗೆ ಥಳಿಸಿರುವ ಘಟನೆ ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಯಲ್ಲಿ ನಡೆದಿದೆ. 

ಆಶ್ರಯ ಮನೆಗೆ ಅರ್ಜಿ ಸಲ್ಲಿಸಲು ವಾಸ ದೃಢೀಕರಣ ಪತ್ರ ನೀಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿಷಕಂಠ ಮಹಿಳೆಗೆ ಪೋನ್ ಮಾಡಿ ಕೆಟ್ಟದ್ದಾಗಿ ಮಾತನಾಡಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಮಹಿಳೆ‌, ಇತರ ಮಹಿಳೆಯರನ್ನು ‌ಕರೆದುಕೊಂಡು ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಗೆ ಬಂದಿದ್ದಾರೆ.  ಆತನನ್ನು ತರಾಟೆಗೆ ತೆಗೆದುಕೊಂಡು, ಥಳಿಸಿದ್ದಾರೆ.

ಈ ಸಂಬಂಧ ನೌಕರನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. SDA ನೌಕರನನ್ನು ಅಮಾನತು ಮಾಡುವಂತೆ ಪಾಲಿಕೆಯ ಆಯುಕ್ತರು ಡಿ.ಸಿ.ಗೆ ಶಿಫಾರಸು ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99