ಅಣ್ಣನ ಮೇಲಿನ ಸಿಟ್ಟಿಗೆ ತಂಗಿಯ ಮೇಲೆ ಎಂಟು ಜನ ಕಾಮುಕರಿಂದ ಅತ್ಯಾಚಾರ!
Thursday, July 8, 2021
ಬರೇಲಿ: ಅಣ್ಣನ ಮೇಲಿನ ಸಿಟ್ಟಿಗೆ 16 ವರ್ಷದ ಬಾಲಕಿಯ ಮೇಲೆ ಎಂಟು ಜನ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಅಣ್ಣ ಅತ್ಯಾಚಾರಿಗಳ ಕುಟುಂಬದ ಗೆಳತಿಯೊಂದಿಗೆ ಪರಾರಿಯಾಗಿದ್ದ. ತಮ್ಮ ಕುಟುಂಬದ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಸೇಡು ತೀರಿಸಿಕೊಳ್ಳಲು ಈ ರೀತಿಯ ಕೃತ್ಯ ಎಸಗಿದ್ದಾರೆ.
ತಂದೆ ತಾಯಿ ಮತ್ತು ಕುಟುಂಬದವರ ಮುಂದೇಯೇ ಸಿಟ್ಟಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ.