ಮಿಸ್ಡ್ ಕಾಲ್ ನಿಂದ ಆರಂಭವಾದ ನಂತರ ಪ್ರೀತಿ ಅತ್ಯಾಚಾರದಲ್ಲಿ ಅಂತ್ಯ-ಏನಿದು ಟ್ರಾಜಿಡಿ ಸ್ಟೋರಿ?
Saturday, July 10, 2021
ಮೈಸೂರು : ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿ, ಪ್ರೀತಿಯಾಗಿ ಕೊನೆಗೆ ಅತ್ಯಾಚಾರ ಆರೋಪದೊಂದಿಗೆ ಅಂತ್ಯಗೊಂಡ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಸಲಾವುದ್ದೀನ್ (26) ಎಂಬಾತ ಅತ್ಯಾಚಾರ ಆರೋಪಿಯಾಗಿದ್ದಾನೆ. ಈತನಿಗೆ ಮಿಸ್ಡ್ ಕಾಲ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿ ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ವಿವಾಹವಾಗುವ ನಿರ್ಧಾರ ಮಾಡಿದ್ದರು.ಈ ನಡುವೆ ಸಲಾವುದ್ದೀನ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.
ಪ್ರಿಯತಮನ ಮಾತನ್ನು ನಂಬಿದ ಯುವತಿ ಆತನಿಗೆ ಸಾಕಷ್ಟು ಹಣವನ್ನೂ ಕೊಟ್ಟಿದ್ದಳು.ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯಿಂದ ಹಣ ಪಡೆದ ಸಲಾವುದ್ದೀನ್, ಇದೀಗ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.