ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಡಾನ್ಸ್ ವೈರಲ್... ಇಲ್ಲಿದೆ ನೋಡಿ ವಿಡಿಯೋ..
Saturday, July 24, 2021
ನವದೆಹಲಿ : ‘ವಿಂಕ್ ಗರ್ಲ್’ ಎಂದೇ ಖ್ಯಾತರಾದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಹೊಸ ಪೋಸ್ಟಂತೂ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.
ಪ್ರಿಯಾ, ಕ್ರೀಂ ಬಣ್ಣದ ಸೀರೆ ಉಟ್ಟುಕೊಂಡು ಮಲಯಾಳಿ ಹಾಡೊಂದಕ್ಕೆ, ರಸ್ತೆಯ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಅವರ ಈ ಆಕರ್ಷಕ ಡಾನ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಈ ಪೋಸ್ಟಿಗೆ ಅದಾಗಲೇ 3 ಲಕ್ಷಕ್ಕೂ ಹೆಚ್ಚು ಲೈಕುಗಳ ಬಂದಿವೆ. ಈ ಪೋಸ್ಟ್ಗೆ, “ನನ್ನೊಳಗಿರುವ ಮಲಯಾಳಿಯನ್ನು ಹೊರತರಲು ಯಾವುದೋ ಒಂದು ನೆಪ” ಎಂದು ಶೀರ್ಷಿಕೆ ನೀಡಿದ್ದಾರೆ,