
ಕೆಲವೊಂದು ಸಂಬಂಧಗಳಿಗೆ ಕೊನೆಯೇ ಇಲ್ಲ ಎಂದು ರಕ್ಷಿತ ಪೋಸ್ಟ್ - ಮತ್ತೆ ಒಂದಾದ ರಕ್ಷಿತಾ - ದಚ್ಚು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ರಕ್ಷಿತಾ ನಡುವಿನ ಗೆಳೆತನದಲ್ಲಿ ಕೆಲವು ದಿನಗಳ ಹಿಂದಷ್ಟೆ ಬಿರುಕು ಮೂಡಿತ್ತು.ಆದರೆ ಇದೀಗ ಮತ್ತೆ ಅವರಿಬ್ಬರು ಒಂದಾಗಿದ್ದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ ಈಗ ರಕ್ಷಿತಾ ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿ, ‘ಕೆಲ ಸಂಬಂಧಗಳಿಗೆ ಕೊನೆಯೇ ಇಲ್ಲ ಅದು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ’ ಎಂದು ಬರೆದಿದ್ದಾರೆ.