ಮುಕ್ತಾಯಗೊಳ್ಳುತ್ತಿದೆ 'ಬ್ರಹ್ಮಗಂಟು' ಸೀರಿಯಲ್: ನಟ ಭರತ್ ಬೊಪಣ್ಣ ಭಾವುಕ....
Thursday, July 8, 2021
ಸುಮಾರು ನಾಲ್ಕು ವರ್ಷಗಳಿಂದ ಜೀ ಕನ್ನಡ ವಾಹಿನಿಯ ವೀಕ್ಷಕರನ್ನು ಮನೋರಂಜಿಸುತ್ತಿರುವ 'ಬ್ರಹ್ಮಗಂಟು' ಧಾರಾವಾಹಿ ಮುಕ್ತಾಯವಾಗುತ್ತಿದೆ. ಈ ಬಗ್ಗೆ ನಟ ಭರತ್ ಬೊಪಣ್ಣ ಭಾವುಕ ಪೋಸ್ಟನ್ನು ಶೇರ್ ಮಾಡಿಕೊಂಡಿದ್ದಾರೆ.
'ಬ್ರಹ್ಮಗಂಟು ಧಾರಾವಾಹಿಯ ಕೊನೆ ಶೆಡ್ಯೂಲ್ ಮುಗಿಸಿರುವೆ. ನಾಲ್ಕಕ್ಕೂ ಹೆಚ್ಚು ವರ್ಷಗಳ ಜರ್ನಿ, ಸಾವಿರಕ್ಕೂ ಹೆಚ್ಚಿನ ಎಪಿಸೋಡ್ ಅಂತ್ಯವಾಗುತ್ತಿದೆ. ಇದೊಂದು ಅದ್ಭುತ ಪಯಣ. ಈ ಪ್ರಾಜೆಕ್ಟ್ ನನಗೆ ಸದಾ ಸ್ಪೆಷಲ್ ಆಗಿರುತ್ತದೆ. ಶ್ರುತಿ ನಾಯ್ಡು, ರಮೇಶ್ ಇಂದಿರಾ ಸರ್ ಹಾಗೂ ಜೀ ಕನ್ನಡ ವಾಹಿನಿ ನನ್ನನ್ನು ನಂಬಿ ಈ ಅವಕಾಶ ಮತ್ತು ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಮೇಲಿಟ್ಟ ಭರವಸೆ ಹಾಗೂ ನಂಬಿಕೆಯನ್ನು ನಾನೂ ಪೂರ್ತಿಗೊಳ್ಳಿಸಿರುವೆ, ಎಂದು ಭಾವಿಸುತ್ತೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಸಹ ಕಲಾವಿದರಿಗೂ ಧನ್ಯವಾದಗಳು. ಅದರಲ್ಲೂ ನಿರ್ದೇಶಕ ಪ್ರತಾಪ್, ತಂತ್ರಜ್ಞರು, , ಲೈಟ್ ಆಫೀಸರ್ ನಿಮ್ಮೆಲ್ಲರ ಸಪೋರ್ಟ್‌ನಿಂದ ಈ ಧಾರಾವಾಹಿ ಯಶಸ್ವಿಯಾಗಿ ಪ್ರಸಾರವಾಗಿದೆ. ನಮಗೆ ಇಷ್ಟೊಂದು ಪ್ರೀತಿ ತೋರಿಸಿದ ಕರ್ನಾಟಕದ ಜನರಿಗೆ ಧನ್ಯವಾದಗಳು. ಮತ್ತೊಂದು ಒಳ್ಳೆ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್ ಮಾಡುವೆ. ಕೊನೆಯ ಸಂಚಿಕೆಯನ್ನು ನೋಡುವುದು ಮರೆಯಬೇಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ,' ಎಂದು ಭರತ್ ಬರೆದುಕೊಂಡಿದ್ದಾರೆ.