ಈ ಮಹಿಳಾ ಎಸ್ಐ ಆತ್ಮಹತ್ಯೆ ಮಾಡಿಕೊಂಡದ್ದು ಈ ಕಾರಣಕ್ಕಂತೆ...
Thursday, July 8, 2021
ಇಂದೋರ್ (ಮಧ್ಯಪ್ರದೇಶ): ವಿಷ ಸೇವಿಸಿ ಮಹಿಳಾ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಟ್ಲಮ್ ಜಿಲ್ಲೆಯಲ್ಲಿ ನಡೆದಿದೆ.
ವಿಷ ಸೇವಿಸಿ 35 ವರ್ಷದ ಮಹಿಳಾ ಸಬ್ ಇನ್ಸ್ಪೆಕ್ಟರ್ ಕವಿತಾ ಸೋಲಂಕಿ ಮಂದ್ಸೌರ್ ಜಿಲ್ಲೆಯಲ್ಲಿರುವ ಆಕೆಯ ಪಾಲಕರನ್ನು ಭೇಟಿ ಮಾಡುವುದಾಗಿ ಹೇಳಿ ಹೋಗಿದ್ದರು. ಬುಧವಾರ ತವರಿನಿಂದ ಕವಿತಾ ಅವರು ಮರಳಿ ರಾಟ್ಲಮ್ನಲ್ಲಿರುವ ನಿವಾಸಕ್ಕೆ ಬಂದಿದ್ದರು. ಈ ವೇಳೆ ವಿಷ ಸೇವಿಸಿದ್ದಾರೆ. ಸ್ಥಳಕ್ಕೆ ಬಂದು ಸಹೋದ್ಯೋಗಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಕವಿತಾ ಅವರು ಅಸುನೀಗಿದ್ದಾರೆ. ಇವರು ಸಾವಿಗೂ ಮುನ್ನ ಬರೆದಿರುವ ಡೆತ್ನೋಟ್ ಪತ್ತೆಯಾಗಿದ್ದು, ಮದುವೆಯಾಗದಿದ್ದಕ್ಕೆ ಅವರು ಖಿನ್ನತೆಗೆ ಒಳಗಾಗಿದ್ದರೆಂದು ತಿಳಿದುಬಂದಿದೆ.
ವಯಸ್ಸಾಗಿದ್ದರು ಮದುವೆ ಆಗದಿದ್ದಕ್ಕೆ ತುಂಬಾ ಬೇಸರಗೊಂಡಿದ್ದರು. ಅಲ್ಲದೆ, ಮದುವೆ ಕುರಿತು ಜನರು ಆಗಾಗ ಕೇಳುವ ಪ್ರಶ್ನೆಗೆ ಉತ್ತರಿಸಲು ಅವರಿಗೆ ಇರಿಸುಮುರಿಸಾಗಿತ್ತೆಂದು ತಿಳಿದಿದೆ. ಈ ಎಲ್ಲ ನೋವಿನಿಂದ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆಂದು ಈ ಬಗ್ಗೆ ಮಾತನಾಡಿರುವ ರಾಟ್ಲಮ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ತಿವಾರಿ ತಿಳಿಸಿದ್ದಾರೆ.