ಮೆಟ್ರೋ ಸ್ಟೇಷನ್ ನಲ್ಲಿ ಪ್ರಾಣ ಬಿಡಲು ಸಿದ್ಧಳಾದ ಯುವತಿ.. ಲೇಡಿ ಕಾನ್ಸ್ಟೇಬಲ್ ಮಾಡಿದ ಈ ಕೃತ್ಯಕ್ಕೆ ಎಲ್ಲರಿಂದ ಮೆಚ್ಚುಗೆ..
Monday, July 26, 2021
ನವದೆಹಲಿ: ಯುವತಿಯೊಬ್ಬಳು ಮೆಟ್ರೋ ಸ್ಟೇಷನ್ನಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ್ದು,ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಂದಾಗಿ ಆಕೆಯ ಪ್ರಾಣ ಉಳಿಯುವಂತಾಗಿದೆ. ಈ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿ ಹತ್ತಿರದ ಫರಿದಾಬಾದ್ನಲ್ಲಿ ನಡೆದಿದೆ.
ಕೆಲಸದ ಒತ್ತಡದಿಂದಾಗಿ ಯುವತಿ ಪ್ರಾಣ ಬಿಡಲು ಸಿದ್ಧರಾಗಿದ್ದಳು. ಸ್ಟೇಷನ್ನ ಹೊರಭಾಗದ ಗೋಡೆಯಲ್ಲಿದ್ದ ಅಡ್ಡಪಟ್ಟಿಯಲ್ಲಿ ಕುಳಿತುಕೊಂಡು, ಅಲ್ಲಿಂದ ಹಾರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಹೀಗೆ ಮಾಡುತ್ತಿರುವಾಗ ಧೈರ್ಯ ತೆಗೆದುಕೊಂಡ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು, ನಿಧಾನವಾಗಿ ಅವಳಿಗೆ ಗೊತ್ತಾಗದಂತೆ ಸೈಡಿನಿಂದ ಅವಳ ಬಳಿ ಬಂದಿದ್ದಾರೆ. ಹತ್ತಿರ ಬರುತ್ತಿದ್ದಂತೆ, ಯುವತಿ ಕಾನ್ಸ್ಟೇಬಲ್ ಬರುತ್ತಿದ್ದನ್ನು ಗಮನಿಸಿದ್ದಾಳೆ. ತಕ್ಷಣ ಕಾನ್ಸ್ಟೇಬಲ್ ವೇಗವಾಗಿ ಬಂದು ಯುವತಿಯ ಕೈ ಹಿಡಿದುಕೊಂಡಿದ್ದಾರೆ. ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ಮೇಲಿನಿಂದ ಕೆಳಗಿಳಿದಿದ್ದಾರೆ. ಇಬ್ಬರು ಸೇರಿ ಬಲವಂತವಾಗಿ ಯುವತಿಯನ್ನು ಮೇಲೆ ಹತ್ತಿಸಲಾಗಿದೆ. ಸರ್ಫರಾಜ್ ಹೆಸರಿನ ಕಾನ್‌ಸ್ಟೆಬಲ್ ಧೈರ್ಯಶಾಲಿಯಾಗಿ ರಕ್ಷಣಾ ಕಾರ್ಯಾಚರಣೆ ಮಾಡಿರುವ ಬಗ್ಗೆ ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಪ್ರಶಂಸಿಸಿದ್ದಾರೆ.