ಗನ್ ಹಿಡಿದು ಸೆಲ್ಫಿ ತೆಗೆದು ಕೊಳ್ಳುವಾಗ ಟ್ರಿಗರ್ ಒತ್ತಿ ಹೆಣವಾದ ನವವಿವಾಹಿತೆ...
Monday, July 26, 2021
26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ ಮೃತಪಟ್ಟಿದ್ದಾರೆ. ಸೆಲ್ಫಿಗಾಗಿ ಕ್ಲಿಕ್ ಮಾಡಲು ಹೋಗಿ ಗನ್ ಟ್ರಿಗರ್ ಒತ್ತಿಬಿಟ್ಟಿದ್ದಾರೆ. ಗನ್ ಲೋಡ್ ಆಗಿದ್ದು, ಇದು ಅವರಿಗೆ ತಿಳಿದಿರಲಿಲ್ಲ. ಇದರಿಂದಾಗಿ ಗುಂಡು ಹಾರಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಇವರು ವಿವಾಹ ಆಕಾಶ್ ಅವರ ಜತೆ ಕಳೆದ ಮೇ ತಿಂಗಳಿನಲ್ಲಿ ಆಗಿದ್ದರು. ಇದು ಲೈಸೆನ್ಸ್ ಇರುವ ಗನ್, ಪಂಚಾಯಿತಿ ಚುನಾವಣೆ ವೇಳೆ ಇದನ್ನು ನಾವು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದೆವು. ಆದರೆ ಮೊನ್ನೆಯಷ್ಟೇ ಇದನ್ನು ಮಗ ವಾಪಸ್ ತಂದಿದ್ದ. ಮಹಡಿಯ ಮೇಲೆ ಇಟ್ಟಿದ್ದೆವು. ಇದನ್ನು ಹಿಡಿದು ರಾಧಿಕಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಅಚಾತುರ್ಯವಾಗಿದೆ ಎಂದು ಮಾವ ರಾಜೇಶ್ ಗುಪ್ತಾ ವಿವರಿಸಿದ್ದಾರೆ.