ಫೋಟೋದಲ್ಲಿರುವ ಈ ಸರವೇ ಮಹಿಳೆಯ ಕೊಲೆಗೆ ಕಾರಣವಾಯ್ತು! ಈ ಭೀಕರ ಕೊಲೆ ಪ್ರಕರಣದ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ?
Monday, July 12, 2021
ಬೆಂಗಳೂರು: ಭೀಕರವಾಗಿ ಕೊಲೆಯಾದ ಮಹಿಳೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಂಜಿತಾ( 26) ಕೊಲೆಯಾದ ಮಹಿಳೆ. ರಂಜಿತಾರ ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಕ್ಷಿ ನಾಶ ಪಡಿಸಲು ಯತ್ನಿಸಲಾಗಿತ್ತು. ಆರೋಪಿಗಳು ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು. ರಂಜಿತಾ ಅವರು ಫೋಟೋದಲ್ಲಿ ಧರಿಸಿದ್ದ ಚಿನ್ನದ ಸರಕ್ಕಾಗಿ ಈ ಆರೋಪಿಗಳು ಅವರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಅಸಲಿಗೆ ರಂಜಿತಾ ಅವರು ತಮ್ಮ ಸಂಬಂಧಿಕರ ಸರವನ್ನು ಪಡೆದು ಅದನ್ನು ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋ ಅನ್ನು ಅವರ ಪರಿಚಯಸ್ಥರಾಗಿದ್ದ ಇಂದ್ರಮ್ಮ ನೋಡಿದ್ದರು. ಸುಮಾರು 40 ಗ್ರಾಂ ಚಿನ್ನದ ಸರ ಅದಾಗಿತ್ತು. ಈ ಸರ ರಂಜಿತಾ ಅವರದ್ದೇ ಎಂದುಕೊಂಡು ಅದನ್ನು ಹೇಗಾದರೂ ಲಪಟಾಯಿಸಬೇಕು ಎಂದು ಹೊಂಚು ಹಾಕಿದ್ದಳು ಇಂದ್ರಮ್ಮ. ನಂತರ ಇಂದ್ರಮ್ಮ ರಂಜಿತಾ ಅವರ ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದಿದ್ದಳು.
ಈ ವೇಳೆ ರಂಜಿತಾ ಸ್ನಾನಕ್ಕೆ ಹೋಗಿದ್ದರು. ಅದೇ ವೇಳೆ ಇನ್ನೊಬ್ಬ ಆರೋಪಿ ರಾಜಶೇಖರನನ್ನು ಕರೆದಿದ್ದಾಳೆ. ಸ್ನಾನ ಮುಗಿಸಿ ಬರುತ್ತಿದ್ದಂತೆಯೇ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾರೆ. ನಂತರ ಸರಕ್ಕಾಗಿ ಎಲ್ಲೆಡೆ ಹುಡುಕಿದ್ದಾರೆ. ಅದು ಸಿಗದಿದ್ದಾಗ ಕಿವಿಯಲ್ಲಿದ್ದ ಓಲೆ ಮತ್ತು ತಾಳಿಯ ಗುಂಡಿನ ಮೇಲೆ ಕಣ್ಣು ಹೋಗಿದೆ. ಕಿವಿಯನ್ನು ಕತ್ತರಿಸಿ ಓಲೆ ತೆಗೆದುಕೊಂಡಿದ್ದಾರೆ. ಆದರೆ ಅದು ಹಿತ್ತಾಳೆಯದ್ದು ಎಂದು ತಿಳಿದಾಗ ಅಲ್ಲಿಯೇ ಎಸೆದು ಚಾಕುವನ್ನು ರಂಜಿತಾ ಕೈಗೆ ಕೊಟ್ಟು ಪರಾರಿಯಾಗಿದ್ದಾರೆ. ಹೋಗುವಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದರು. ಅದರ ಲೊಕೇಷನ್ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.