ಮದುವೆಗೆ ಕ್ವಿಂಟಾಲ್ ತೂಕದ ಲೆಹೆಂಗಾ ಧರಿಸಿದ ವಧು.. ಫೋಟೋ ವೈರಲ್..
Friday, July 30, 2021
ಕರಾಚಿ: ಪಾಕಿಸ್ತಾನದಲ್ಲಿ ವಧುವೊಬ್ಬಳು ಅವಳ ಮದುವೆಗೆ ಬರೋಬ್ಬರಿ 100ಕೆಜಿ ಅಂದರೆ ಒಂದು ಕ್ವಿಂಟಾಲ್ ತೂಕದ ಲೆಹೆಂಗಾ ತೊಟ್ಟಿದ್ದಳು.
ಲೆಹೆಂಗಾದ ಸೆರಗು ಅರ್ಧ ವೇದಿಕೆಗೇ ಹಾಸುವಷ್ಟು ದೊಡ್ಡದಿತ್ತು. ಕೆಂಪು ಬಣ್ಣದ ಬಟ್ಟೆಗೆ ಪೂರ್ತಿಯಾಗಿ ಹ್ಯಾಂಡ್ ಮೇಡ್ ಡಿಸೈನ್ ಮಾಡಿದ್ದ ಲೆಹೆಂಗಾವನ್ನು ನೋಡಿದ ಜನರೆಲ್ಲ ಅಬ್ಬಾ ಎಂದು ಹುಬ್ಬೇರಿಸಿದ್ದಾರೆ.
ಮದುವೆಗೆ ಬಂದವರೆಲ್ಲರಿಗೂ ವಧುವಿನ ಲೆಹೆಂಗಾ ಮೇಲೇ ಕಣ್ಣಿತ್ತಂತೆ. ಅದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.