-->

ಮಿಸ್ಡ್​​ ಕಾಲ್ ನಿಂದ ಪ್ರೀತಿ ಶುರು- ರಾಂಚಿಯಿಂದ ಬಿಹಾರಕ್ಕೆ ಬಂದು ಅಂಗವಿಕಲನ ಕೈಹಿಡಿದ ಯುವತಿ..!

ಮಿಸ್ಡ್​​ ಕಾಲ್ ನಿಂದ ಪ್ರೀತಿ ಶುರು- ರಾಂಚಿಯಿಂದ ಬಿಹಾರಕ್ಕೆ ಬಂದು ಅಂಗವಿಕಲನ ಕೈಹಿಡಿದ ಯುವತಿ..!

ಸುಪಾಲ್​(ಜಾರ್ಖಂಡ್​): ಈ ಜೋಡಿ ಕೇವಲ ಮಿಸ್ಡ್​​ ಕಾಲ್​ನಿಂದಲೇ ಪ್ರೀತಿಸಿ ರಾಂಚಿಯಿಂದ ಬಿಹಾರಕ್ಕೆ ಬಂದ ಯುವತಿ ಅಂಗವಿಕಲನ ಕೈಹಿಡಿದಿದ್ದಾಳೆ.

ಜಾರ್ಖಂಡ್​ನ ರಾಂಚಿಯಲ್ಲಿ ವಾಸವಾಗಿದ್ದ ಯುವತಿ ಗೌರಿ ಹಾಗೂ ಬಿಹಾರದ ಸುಪಾಲ್​ ನಿವಾಸಿ ವಿಶೇಷ ಚೇತನ ಯುವಕ ಮುಖೇಶ್ ಎಂಬವನನ್ನು ಪ್ರೀತಿಸಿ ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಂಚಿಯಲ್ಲಿದ್ದ ಗೌರಿ ಒಂದು ದಿನ ತಪ್ಪಾದ ಫೋನ್​ ನಂಬರ್​ಗೆ ಮಿಸ್ಡ್​​​ ಕಾಲ್ ಮಾಡಿದ್ದಾಳೆ. ಅದು ಬಿಹಾರದ ಸುಪಾಲ್​ನಲ್ಲಿ ವಾಸವಾಗಿದ್ದ ಮುಖೇಶ್​ ಅವರದ್ದಾಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಭಾಷಣೆ ಶುರುವಾಗಿ ಪ್ರೀತಿಸಲು ಶುರು ಮಾಡಿದ್ದಾರೆ. ಈ ವೇಳೆ ಗೌರಿಯೇ ಮೊದಲು ಮದುವೆ ಪ್ರಸ್ತಾಪ ಮಾಡಿದ್ದು
ಮುಖೇಶ್​ ತಾನೋರ್ವ ದಿವ್ಯಾಂಗ ವ್ಯಕ್ತಿಯಾಗಿದ್ದು ನಿನಗೆ ಒಳ್ಳೆಯ ಹುಡುಗ ಸಿಗಲಿ ಎಂದು ಹೇಳಿದ್ದಾನೆ.

ಆದರೆ ಯುವಕನ ಮನವಿ ತಿರಸ್ಕರಿಸಿದ ಗೌರಿ ತನ್ನ ಪಟ್ಟುಬಿಡದೆ ರಾಂಚಿಯಿಂದ ಬಿಹಾರದ ಸುಪಾಲ್​ಗೆ ಬಂದು ಕೋರ್ಟ್​ನಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99