-->

ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದೀರಾ..? ಹಾಗಾದರೆ ಪೋಷಕರೇ ಎಚ್ಚರ.. ಎಚ್ಚರ....ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದೀರಾ..? ಹಾಗಾದರೆ ಪೋಷಕರೇ ಎಚ್ಚರ.. ಎಚ್ಚರ....ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

 
ತಿರುವನಂತಪುರಂ:  ಆನ್​​ಲೈನ್​ ಕ್ಲಾಸ್​ಗೆ ಉಪಯೋಗವಾಗಲಿ ಎಂದು ಹಣ ಖರ್ಚು ಮಾಡಿ ಸ್ಮಾರ್ಟ್​ ಫೋನ್​ ಕೊಡಿಸಿದರೆ ಪಬ್​ಜಿ ಗೇಮ್​ ಆಡುವ ಮೂಲಕ ಬಾಲಕನೊಬ್ಬ ಪಾಲಕರ ಲಕ್ಷಾಂತರ ರೂಪಾಯಿಯನ್ನು ಕಳೆದಿದ್ದಾನೆ. ಈಗ ಟೈಮ್ ಕೇರಳದ ಕೋಜಿಕ್ಕೋಡ್ನಲ್ಲಿ  ಘಟನೆ ನಡೆದಿದೆ.

ಕೋಜಿಕ್ಕೋಡ್​ ಮೂಲದ ಮಹಿಳೆಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗ 9ನೇ ತರಗತಿ ಹಾಗೂ ಮತ್ತೋರ್ವ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಎಂದು ಇಬ್ಬರಿಗೂ ಮೊಬೈಲ್ ಕೊಡಿಸಿದ್ದರು. ಅಕೌಂಟ್​ ಅಪ್​ಗ್ರೇಡ್​ ಮತ್ತು ಆ್ಯಪ್​ ಖರೀದಿಸಲು ತಾಯಿಯ ಬ್ಯಾಂಕ್​ ಖಾತೆಯಿಂದ ಇಬ್ಬರು ಮಕ್ಕಳು ಸುಮಾರು 1 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಬ್ಯಾಂಕ್​ ಖಾತೆಯಿಂದ ಹಣ ಇದ್ದಕ್ಕಿದ್ದಂತೆ ಕಡಿತಗೊಂಡಿರುವುದನ್ನು ನೋಡಿ ತಾಯಿಗೆ ಶಾಕ್​ ಆಗಿದೆ. ಗೊಂದಲಕ್ಕೀಡಾದ ತಾಯಿ ಏನು ಮಾಡಬೇಕೆಂದ ತೋಚದೆ ತಕ್ಷಣ ಸೈಬರ್​ ಕ್ರೈಮ್​ ಪೊಲೀಸರಿಗೆ ಕರೆ ಮಾಡುತ್ತಾಳೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ ತನಿಖೆ ಮಾಡಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತದೆ. ಹಣ ಕಳೆದಿರುವುದು ಬೇರೆ ಯಾರೂ ಅಲ್ಲ, ನಿಮ್ಮ ಮಕ್ಕಳೇ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99