ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ಈ ಸಂದರ್ಭ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ತಯಾರಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಸಂಬಂಧ ಮುಂಬೈ ಕ್ರೈಂ ವಿಭಾಗದ ಪೊಲೀಸರು ಶಿಲ್ಪಾ ಅವರನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ತಾನು ಗಂಡನ ಬಿಸಿನೆಸ್ನಲ್ಲಿ ತಲೆ ಹಾಕಿರಲಿಲ್ಲ ಎಂದಿರುವ ನಟಿ ಅದರಿಂದ ಯಾವುದೇ ಲಾಭವನ್ನು ತಾನು ಪಡೆಯುತ್ತಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ನನ್ನ ಗಂಡ ಹಾಟ್ಶಾಟ್ ಆ್ಯಪ್ಗೆ ಹಾಕುತ್ತಿದ್ದದ್ದು ಅಶ್ಲೀಲ ವಿಡಿಯೋಗಳನ್ನಲ್ಲ. ಶೃಂಗಾರದ ವಿಡಿಯೋಗಳನ್ನು ಹಾಕುತ್ತಿದ್ದರು. ಅದರಲ್ಲಿ ಯಾವ ರೀತಿಯ ವಿಡಿಯೋಗಳಿರುತ್ತಿದ್ದವು ಎನ್ನುವುದಕ್ಕೆ ನನಗೆ ನಿಖರವಾದ ಮಾಹಿತಿಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.